ಚುರುಕು ಪಡೆದ ಕರೊನಾ ತಪಾಸಣೆ

27 YLP 04
Published on

ಯಲ್ಲಾಪುರ: ತಾಲೂಕಿನಲ್ಲಿ ಕರೊನಾ ತಪಾಸಣೆ ಚುರುಕುಗೊಳಿಸಲಾಗಿದ್ದು, ಪ್ರತಿನಿತ್ಯ ಮೂರ್ನಾಲ್ಕು ತಂಡಗಳ ಮೂಲಕ ಗ್ರಾಮೀಣ ಭಾಗಗಳಿಗೂ ತೆರಳಿ ತಪಾಸಣೆ ನಡೆಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಕೆಲವರ ಅಪಪ್ರಚಾರಗಳಿಂದ ತಪಾಸಣೆಗೆ ಹಿಂಜರಿಯುತ್ತಿದ್ದ ಜನರು ಈಗ ನಿಧಾನವಾಗಿ ಸಹಕರಿಸಲು ಆರಂಭಿಸಿದ್ದಾರೆ.

ಕಿರವತ್ತಿ ಸಮೀಪದ ಬೈಲಂದೂರು ಗೌಳಿವಾಡ, ಹಾಸಣಗಿ ಗ್ರಾ.ಪಂ. ವ್ಯಾಪ್ತಿಯ ಮಾದನಸರ, ಪಟ್ಟಣದ ಸರ್ಕಾರಿ ಆಸ್ಪತ್ರೆಗಳಲ್ಲಿ ಭಾನುವಾರ ತಪಾಸಣೆ ನಡೆಸಲಾಯಿತು. 13 ಜನರಿಗೆ ಸೋಂಕು ದೃಢಪಟ್ಟಿದೆ. ಬೈಲಂದೂರು ಗೌಳಿವಾಡದಲ್ಲಿ 9, ಇಡಗುಂದಿ, ಕಾಳಮ್ಮನಗರ, ಗೋಪಾಲಕೃಷ್ಣ ಗಲ್ಲಿ, ಸಹಸ್ರಳ್ಳಿಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಸೆ. 28ರಂದು ಸರ್ಕಾರಿ ಆಸ್ಪತ್ರೆ, ಕಳಚೆ, ಬೀಗಾರ, ವಜ್ರಳ್ಳಿ, ತೇಲಂಗಾರ, ಅಲ್ಕೇರಿ ಗೌಳಿವಾಡ, ಜೋಗಿಕೊಪ್ಪ, ಶಿರನಾಲಾ ಹಾಗೂ ಬೆಂಡಿಗೇರಿಗಳಲ್ಲಿ ತಪಾಸಣೆ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net