

ಬೈಲಹೊಂಗಲ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಜರುಗಿದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಮತ ಎಣಿಕೆ ಮುಗಿದು ಲಿತಾಂಶ ಪ್ರಕಟಗೊಂಡ ಬಳಿಕ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದರು.
ಬಾಳೇಕುಂದರಗಿ ಪ್ಯಾನಲ್, ರೈತ ಅಭಿವೃದ್ಧಿ ಪ್ಯಾನಲ್ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದ ನಂತರ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಬೆಂಬಲಿಗರು ಲಿತಾಂಶದ ಪಟ್ಟಿಯನ್ನು ಮರು ಪರಿಶೀಲಿಸುವಂತೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದರು. ಆಗ ಬಾಳೇಕುಂದರಗಿ ಪ್ಯಾನಲ್ ಮುಖಂಡ ಬಸವರಾಜ ಬಾಳೇಕುಂದರಗಿ ಹಾಗೂ ಬೆಂಬಲಿಗರು ಲಿತಾಂಶ ಘೋಷಣೆ ಆಗಿದೆ.
ಮರು ಪರಿಶೀಲನೆ ಬೇಡ ಎಂದು ಚುನಾವಣಾಧಿಕಾರಿಗಳಿಗೆ ತಿಳಿಸಿದರು. ಬಳಿಕ ಎರಡು ಗುಂಪುಗಳ ಮುಖಂಡರು, ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುತ್ತಿದ್ದಂತೆಯೇ ಪೊಲೀಸರು ಮಧ್ಯೆ ಪ್ರವೇಶಿಸಿ ಲಾಠಿ ಬೀಸಿ ಎರಡು ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಲಿತಾಂಶದ ಮತ ಪಟ್ಟಿ ಮರು ಪರಿಶೀಲನೆಯಲ್ಲೂ 15, 18, 21 ಬೂತ್‌ಗಳಲ್ಲಿ ನಿಖರತೆ ಇಲ್ಲ.
ಆ ಶೀಟ್‌ಗಳು ಸಮರ್ಪಕವಾಗಿ ಲಭ್ಯವಿಲ್ಲ ಎಂದು ದೊಡಗೌಡರ ಗುಂಪು ಆರೋಪಿಸಿತು. ಚುನಾವಣಾಧಿಕಾರಿ ಎಂ.ಎನ್. ಮಣಿ ಮಾತನಾಡಿ, ಲಿತಾಂಶ ಘೋಷಣೆ ನಂತರವು ಅವರ ಬೇಡಿಕೆಯಂತೆ ರಿಜಲ್ಟ್ ಶೀಟ್ ಮರು ಪರಿಶೀಲನೆ ನಡೆಸಿದ್ದು, ಅದು ನಿಖರವಾಗಿದೆ ಎಂದರು.