ಚುನಾವಣೆಯಲ್ಲಿ ಗೆಲ್ಲಲು ಬಿಎಸ್‌ವೈ ಜಪ

bkt-16-7
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಜೆಪಿ ಉಚ್ಛಾಟಿತ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಅಶೋಕ ಮುತ್ತಿನಮಠ, ವಿಜಯ ಸುಲಾಖೆ, ರವಿ ಕುಮಟಗಿ, ಬಸವರಾಜ ಕಟಗೇರಿ, ಶಿವು ಮೇಲ್ನಾಡ ಇತರರು ಇದ್ದರು.
Published on

ಬಾಗಲಕೋಟೆ: ಬಿಜೆಪಿಯಲ್ಲಿ ಇರುವ ಶಾಸಕರಿಗೆ ತಾವು ಗೆಲ್ಲಲು ಯಡಿಯೂರಪ್ಪ ಬೇಕು. ಆದರೆ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವಾಗ ಎಲ್ಲಿದ್ದರು ಇವರೆಲ್ಲ…? ಚುಣಾವಣೆ ಬೇಕಾಗುವ ಬಿಎಸ್ ವೈ, ಗೆದ್ದ ಮೇಲೆ ಯಾಕೇ ಬೇಡ ಎಂದು ಲಿಂಗಾಯತ ಮುಖಂಡರ ವಿರುದ್ದ ನೇರವಾಗಿಯೇ ಹರಿಹಾಯ್ದಿದ್ದಾರೆ ಬಿಜೆಪಿ ಉಚ್ಛಾಟಿತ ಮುಖಂಡ ಮಲ್ಲಿಕಾರ್ಜುನ ಚರಂತಿಮಠ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ವೈ ರಾಜೀನಾಮೆ ಕೇಳಿದಾಗ ನಮ್ಮ ಲಿಂಗಾಯತ ಶಾಸಕರು ಯಡಿಯೂರಪ್ಪ ಅವರನ್ನ ಎತ್ತಿಹಿಡಿಬೇಕಿತ್ತಲ್ವಾ..? ಈಗ ಚುನಾವಣೆ ಬಂದಿದೆ ಪ್ರಚಾರಕ್ಕೆ ಯಡಿಯೂರಪ್ಪ ಯಡಿಯೂರಪ್ಪ ಎನ್ನುವ ಶಾಸಕರು(ವೀರಣ್ಣ ಚರಂತಿಮಠ) ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸುವಾಗ. ಅದನ್ನ ವಿರೋಽಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಅಂತ ಯಾಕ ಹೇಳಲಿಲ್ಲ ಎಂದು ಪ್ರಶ್ನಿಸಿದರು.
ಈ ಹಿಂದೆ ಕಾಂಗ್ರೆಸ್‌ನಲ್ಲಿ ವಿರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ಏರಪೋರ್ಟಗೆ ಹೋಗಿ ತಗೆದರು. ಅದರ ಪರಿಣಾಮ ಕಾಂಗ್ರೆಸ್ ಎದುರಿಸಿತು. ಅದೇ ರೀತಿ ಬಿಜೆಪಿಯಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಹೆದರಿಕೆಯಲ್ಲಿರುವ ಬಿಜೆಪಿ ಶಾಸಕರು ಪ್ರಚಾರಕ್ಕೆ ಯಡಿಯೂರಪ್ಪ ಅವರನ್ನ ಕರೆಯಿಸುತ್ತಿದ್ದಾರೆ. ಯಡಿಯೂರಪ್ಪಾರು ಬಂದಾರೊ ? ಇಲ್ಲೋ ಹೆಲಿಪ್ಯಾಡ್ ಅಲ್ಲಿ ಇಳಿತಂತ, ಇಲ್ಲಿ ಇಳಿತಂತ ಹೇಳಿ ನನ್ನ ಕ್ಷೇತ್ರಕ್ಕೆ ಬರ್ತಾರೋ ಇಲ್ಲೋ ಅಂತ ಗದ್ ಗದ್ ನಡಗುತ್ತಿದ್ದಾರೆ. ಇವರಿಗೆಲ್ಲ ಸ್ವಂತ ಬಲದ ಮೇಲೆ ಮತ ಕೇಳುವ ತಾಕತ್ ಇಲ್ಲ ಎಂದು ಹರಿಹಾಯ್ದರು.
ಯಡಿಯೂರಪ್ಪ ಅವರಿಗೆ ೮೦ ವರ್ಷ ಆಗಿದೆ. ರಾಜಕೀಯ ಮಾಡಾಕ ಆಗಲ್ಲ ಅಂತಾರ ಆಗಿದ್ದರೆ ಯಡಿಯೂರಪ್ಪ ಅವರನ್ನು ಈಗ ಹಳ್ಳಿ ಹಳ್ಳಿ ತಿರಿಗಿಸುತ್ತಿದ್ದಾರೆ ಯಾಕೆ? ಇವರು (ಬಿಜೆಪಿ ಹೈಕಮಾಂಡ್) ಅವರನ್ನ ಒತ್ತಾಯ ಮಾಡಿ ಕರಕೊಂಡ ಬರುತ್ತಿದ್ದಾರೆ ಎಂದು ಬಿಜೆಪಿ ವರಿಷ್ಠರ ವಿರುದ್ದವೂ ಕಿಡಿಕಾರಿದರು.
ಬಿಎಸ್ ವೈ ಅವರು ಸಿಎಂ ಆದ ತಕ್ಷಣ ಪ್ಲಡ್ ಬಂತು, ಕರೊನ ಬಂತು ಎನ್ನುತ್ತಾರೆ. ಯಡಿಯೂಪ್ಪ ಅವರು ಅವುಗಳನ್ನು ತರಲು ಬರುವದಿಲ್ಲ. ವಿಧಾನಸೌಧಕ್ಕೆ ಶಾಸಕರ ತೆಗೆದುಕೊಂಡು ಹೋಗೊಕೆ ಬರುತ್ತಾರೆ. ಇವರು(ಬಾಗಲಕೋಟೆ ಶಾಸಕರು) ಪ್ಲಡ್ ತೆಗೆದುಕೊಂಡು ಬರುತ್ತಾರೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ನನಗೆ ಟಿಕೆಟ್ ಎಂದಿದ್ದಾರೆ ಎಂದು ಬೀಗಿದ್ದರು. ಆದರೆ, ಸ್ವತಃ ಅವರೇ ಅದನ್ನು ಅಲ್ಲಗಳೆದಿದ್ದಾರೆ. ಒಂದು ಗೊತ್ತಿರಲಿ, ರಾಜ್ಯದಲ್ಲಿ ಈ ವರೆಗೂ ಬಿಜೆಪಿಯಲ್ಲಿ ಟಿಕೆಟ್ ಯಾರದು ಖಾತ್ರಿ ಇಲ್ಲ. ಹಳೇ ಬಿಜೆಪಿ ಹಾಗೂ ಈಗಿನ ಬಿಜೆಪಿ ಬೇರೆ ಬೇರೆ. ನೋಡಿದ್ದೀರಲ್ಲ ೬ ಕೋಟಿ ರೂ. ಮನೆಯಲ್ಲಿ ಸಿಕ್ಕ ಶಾಸಕ ಬೇಲ್ ಮೇಲೆ ಹೊರಗ ಬಂದು ಮೆರವಣಿಗೆ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ೬ ಕೋಟಿ ಸಿಕ್ಕಿದ್ದರೇ ಬೇರೆಯವರಿಗೆ ಮುಖ ತೋರಿಸೋಕೆ ಆಗಲ್ಲ. ಇದನೆಲ್ಲ ನೋಡಿ ನಮ್ಮಂತ ೨೮ ವರ್ಷ ಬಿಜೆಪಿಗೆ ದುಡಿದ ಪಾರ್ಟಿ ಕಾರ್ಯಕರ್ತರಿಗೆ ಎಷ್ಟು ಹೊಟ್ಟಿ ಉರಿದಿರಬೇಕು ಹೇಳಿ ಎಂದು ಇವತ್ತಿನ ಬಿಜೆಪಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಗುಜರಾತ್ ಮಾದರಿ ಬರುವುದು ಕಷ್ಟ. ಸ್ವಲ್ಪ ಮಟ್ಟಿಗೆ ಟಿಕೆಟ್ ಚೆಂಜ್ ಆಗಬಹುದು. ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ ಆಗೋಕೆ ಹೋಗಿದ್ದೇವು. ಇಲ್ಲಿ ಟೋರ್ನಾಮೆಂಟ್ ಮಾಡುತ್ತಿದ್ದೇವೆ. ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನ ನೀಡಲು ತಯಾರಿಯಲ್ಲಿ ಇದ್ದೇವೆ ಎಂದರು.
ನಮ್ಮ ಚರಂತಿಮಠ-ವಸ್ತ್ರದ ಫೌಂಡೇಶನ್ ಒಂದು ತಿಂಗಳಿಂದ ನೋಂದಣಿ ಆಗಿದೆ. ಈ ಹಿಂದೆ ನಮ್ಮ ಹಿರಿಯರು ಮಾಡಿದ ಸಾಮಾಜಿಕ, ಶೈಕ್ಷಣಿಕ ಸೇವೆ ನಾವು ಮುಂದು ವರೆಸಲಿದ್ದೇವೆ ಎಂದು ಸ್ಪಷ್ಟನೆ ನೀಡಿದ ಅವರು, ನಮ್ಮ ಕುಟುಂಬದ ಹಿರಿಯರು ಮಾಡಿದ ದಾನ, ಧರ್ಮ ಪಟ್ಟಿ ದೊಡ್ಡದಿದೆ. ಅದೆಲ್ಲವನ್ನು ಮುಂದುವರೆಸಲೆಂದು ಈಗ ಫೌಂಡೇಶನ್ ಮಾಡಿದ್ದೇವೆ ಎಂದ ಅವರು, ಇದೇ ವೇಳೆ ತಮ್ಮ ಸಹೋದರ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರು ಹೇಳದೇ ತೀವ್ರತರ ಟೀಕೆ ಮಾಡಿದರು.

ಮುಖಂಡರಾದ ಅಶೋಕ ಮುತ್ತಿನಮಠ, ವಿಜಯ ಸುಲಾಖೆ, ರವಿ ಕುಮಟಗಿ, ಬಸವರಾಜ ಕಟಗೇರಿ, ಶಿವು ಮೇಲ್ನಾಡ ಇತರರು ಇದ್ದರು.

ನಾನು ಮೆಂಟಲ್ ಅಲ್ಲ. ಅವರೇ ದೊಡ್ಡ ಮೆಂಟಲ್ (ಶಾಸಕ ವೀರಣ್ಣ ಚರಂತಿಮಠ). ನಮ್ಮ ಮನೆತನದ ಇತಿಹಾಸ ಅವರಿಗೆ ಗೊತ್ತಿಲ್ಲ ಅನಿಸುತ್ತೆ. ನಾವು ಹೇಳಿದ್ದನ್ನು ನೋಡಿ ನೋಡಿ ಖುಷಿ ಪಡಬೇಕು. ಅದು ಬಿಟ್ಟು ವಿರೋಧ ಮಾಡುವುದು ಸರಿಯಲ್ಲ. ಮೊನ್ನೆ ಸಭೆಯಲ್ಲಿ ನಮ್ಮನ್ನು ಹದ್ದು ಬಸ್ತಿನಲ್ಲಿ ಇಡಬೇಕು ಎಂದಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆ ? ಹೀಗೆಯೇ ಮುಂದುವರೆದರೇ ಎರಡು ತಿಂಗಳಿನಲ್ಲಿ ಬಾಗಲಕೋಟೆ ಜನ ತಮಗೆ ತಕ್ಕ ಪಾಠ ಕಲಿಸುತ್ತಾರೆ. ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗಬಾರದು ಎನ್ನುವುದೇ ನಮ್ಮ ಸಿಂಗಲ್ ಅಜೆಂಡಾ. ಕೊಟ್ಟರೇ ನಮ್ಮ ಗುಂಪಿಯನಲ್ಲಿ ಒಬ್ಬರು ಅಭ್ಯರ್ಥಿಯಾಗಲಿದ್ದಾರೆ. ನಾನು ಅವರ ವೈಯಕ್ತಿಕ ದ್ವೇಷಿ ಅಲ್ಲ, ರಾಜಕೀಯ ವಿರೋಧಿ.

  • ಮಲ್ಲಿಕಾರ್ಜುನ ಚರಂತಿಮಠ
    ಬಿಜೆಪಿ ಉಚ್ಛಾಟಿತ ಮುಖಂಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net