ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧೆ

bkt-9-4
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮನಾಬಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಅಬ್ದುಲ್ ಜಮಾದಾರ, ರವುಫ್ ಚೌಧರಿ, ಫಯಾಜ್ ಅಹ್ಮದ ಕೊಯಿಮುತ್ತೂರ, ವಸೀಂ ಜಮಾದಾರ, ಸಲೀಂ ಪಠಾಣ್ ಇದ್ದರು.
Published on

ಬಾಗಲಕೋಟೆ: ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಆಲ್ ಇಂಡಿಯಾ ಮಜ್ಲೀಸ್ -ಎ-ಇತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಭ್ಯರ್ಥಿಗಳು ೧೦೦ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮನಾಬಾದ ಹೇಳಿದರು.


ಎಐಎಂಐಎಂ ಪಕ್ಷ ಕೇವಲ ಮುಸ್ಲಿಂ ಸಮಾಜಕ್ಕೆ ಸಿಮೀತವಾಗಿಲ್ಲ. ಇದೊಂದು ಜಾತ್ಯಾತೀತವಾದ ಪಕ್ಷವಾಗಿದೆ. ಎಲ್ಲ ಸಮಾಜ ದವರನ್ನು ಒಗ್ಗೂಡಿಸಿಕೊಂಡು ಹೋಗುತ್ತದೆ. ಬಿಜೆಪಿ ಸಿದ್ಧಾಂತವನ್ನು ವಿರೋಧಿಸುವ ತಾಕತ್ತು ಕಾಂಗ್ರೆಸ್‌ಗೆ ಇಲ್ಲ. ನಮ್ಮ ಪಕ್ಷಕ್ಕೆ ಇದೆ. ಹೀಗಾಗಿ ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಎಸ್ಸಿ,ಎಸ್ಟಿ ೫೨ ಕ್ಷೇತ್ರಗಳಲ್ಲಿ ಆದ್ಯತೆ ನೀಡಲಾಗುತ್ತಿದೆ. ಪ್ರತಿಯೊಂದು ಮನೆ ಮನೆಗೆ ತಲುಪಿ ಪಕ್ಷದ ಸಿದ್ಧಾಂತ ತಿಳಿಸುವ ಕೆಲಸ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ವಿಧಾನಸಭೆಯ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಲು ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹಾಗೂ ಅಕ್ಬರುದ್ದೀನ್ ಓವೈಸಿ ಬಾಗಲಕೋಟೆ, ಹುಬ್ಭಳ್ಳಿ ಸೇರಿದಂತೆ ವಿವಿಧೆಡೆ ಆಗಮಿಸಲಿದ್ದಾರೆ. ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ ೩, ಬೆಳಗಾವಿ ೧, ವಿಜಯಪುರ ಮಹಾನಗರ ಪಾಲಿಕೆಯಲ್ಲಿ ೨ ಹಾಗೂ ಕೋಲಾರ ಪುರಸಭೆಯಲ್ಲಿ ೨ ಸ್ಥಾನದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದರು.


ಮುಖಂಡರಾದ ಅಬ್ದುಲ್ ಜಮಾದಾರ, ರವುಫ್ ಚೌಧರಿ, ಫಯಾಜ್ ಅಹ್ಮದ ಕೊಯಿಮುತ್ತೂರ, ವಸೀಂ ಜಮಾದಾರ, ಸಲೀಂ ಪಠಾಣ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net