

ಬಾಗಲಕೋಟೆ: ಜಿಲ್ಲಾಡಳಿತ ಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಚುನಾವಣಾ ವಿಭಾಗದ ಇವಿಎಂ, ವಿವಿಪಿಟಿಗಳ ಉಗ್ರಾಣ ಕೊಠಡಿಗಳನ್ನು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಸೋಮವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಕಟ್ಟಡವನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ, ಎನ್.ಐ.ಸಿಯ ಗಿರಯಾಚಾರ, ಚುನಾವಣಾ ತಹಶೀಲ್ದಾರ ನಾಯ್ಕಲಮಠ, ಶಿರಸ್ತೇದಾರ ಗಿ.ವಿ.ರಜಪೂತ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸದರಿ ಕಟ್ಟಡವನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದ ಅನುದಾನಡಿ ನೂತನ ಕಟ್ಟಡವನ್ನು 5.10 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೂತನ ಕಟ್ಟಡ ಎರಡು ಮಹಡಿಯನ್ನು ಹೊಂದಿದ್ದು, ನೆಲ ಮಹಡಿಯಲ್ಲಿ 1646 ಚದುರ ಅಡಿಯನ್ನು ಹೊಂದಿರುವ 6 ಸ್ಟ್ರಾಂಗ್ ರೂಮ್, ಮೊದಲನೇ ಮಹಡಿಯಲ್ಲಿ ಎರಡು ಸ್ಟ್ರಾಂಗ್ ರೂಮ್, ವಿಶಾಲವಾದ ತರಬೇತಿ ಕೇಂದ್ರ ಹೊಂದಿರುತ್ತದೆ. ಸದರಿ ಕಟ್ಟಡ ವಿದ್ಯುತ್ತೀಕರಣದಿಂದ ಹೊಂದಿದ್ದು, ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಕಟ್ಟಡದಲ್ಲಿ ಸ್ಮೋಕ್ ಡಿಟೆಕ್ಟರಗಳನ್ನು ಅಳವಡಿಸಲಾಗಿದ್ದು, ಅದಲ್ಲದೇ ಫೈಯರ್ ಅಲಾರ್ಮ್, ಸುಸಜ್ಜಿತ ಲಿಫ್ಟ್, ಸುತ್ತಲೂ ಕಂಪೌಂಡ್ ಗೋಡೆ, ಕಟ್ಟಡದ ಮುಂದೆ ಅಪ್ರೋಚ್ ರೋಡ್, ಸ್ಟ್ರಾಂಗ್ ರೂಮ್‍ಗಳಿಗೆ ರೂಲಿಂಗ್ ಶೆರ್ಟ ಹಾಗೂ ಮೇನ್ ಗೇಟ್ ಸಹ ಅಳವಡಿಸಲಾಗಿದೆ. ನಿರ್ಮಿತಿ ಕೇಂದ್ರದಿಂದ ಸದರಿ ಕಟ್ಟಡವನ್ನು ನಿರ್ಮಿಸಲಾಗಿದೆ.