ಚಿರತೆ ದಾಳಿಯಿಂದ ಗಾಯ

GKN-PH
Published on

ಗೋಕರ್ಣ: ಹತ್ತಿರದ ಬರ್ಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದೆ. ಕಾಂಗ್ರೆಸ್ ಪದಾಧಿಕಾರಿ ಚಂದ್ರಹಾಸ ನಾಯಕ ಹಿರೇಗುತ್ತಿ (ಪಾಪು) ಅವರಿಗೆ ಚಿರತೆ ದಾಳಿಯಿಂದ ಮೊಣಕೈಗೆ ಗಾಯವಾಗಿದೆ.

ಅಪರಿಚಿತ ವಾಹನವೊಂದರ ಡಿಕ್ಕಿಯಿಂದ ಗಾಯಗೊಂಡ ಚಿರತೆಯೊಂದು ಬರ್ಗಿ ಘಟ್ಟದ ಹೆದ್ದಾರಿ ಮೇಲೆ ಮಲಗಿತ್ತು. ಅಂಕೋಲಾದಿಂದ ಬರುತ್ತಿದ್ದ ಚಂದ್ರಹಾಸ ನಾಯಕ ಅವರು ಇದನ್ನು ಕಂಡು ಚಿರತೆಯನ್ನು ಹೆದ್ದಾರಿಯಿಂದ ಬದಿಗೆ ಸರಿಸಲು ಮುಂದಾದರು.

ಆಗ ಚಿರತೆಯು ಅವರ ಮೇಲೆ ಎರಗಿ ಅವರ ಮೊಣಕೈಯನ್ನು ಕಚ್ಚಿ ಪರಾರಿಯಾಯಿತು. ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net