ಚಿರತೆ ದಾಳಿಗೆ ಮೇಕೆ ಬಲಿ

Published on

ಹನೂರು: ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆಯೊಂದು ಬಲಿಯಾಗಿದೆ.

ಬುಧವಾರ ರಾತ್ರಿ ಬಸಪ್ಪನದೊಡ್ಡಿ ಗ್ರಾಮದ ಮಾದೇವ ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಚಿರತೆ ಕೊಟ್ಟಿಗೆಯಲ್ಲಿದ್ದ ಮೇಕೆಯನ್ನು ತಿಂದು ಹಾಕಿದೆ. ತಾಲೂಕಿನ ಗಂಗನದೊಡ್ಡಿ, ಬಸಪ್ಪನದೊಡ್ಡಿ ಹಾಗೂ ಕಾಂಚಳ್ಳಿ ಭಾಗದಲ್ಲಿ 3 ತಿಂಗಳಿಂದಲೂ ಬೋನಿಗೆ ಬೀಳದ ಚಿರತೆ ಆಗಾಗ್ಗೆ ಮೇಕೆಗಳನ್ನು ಬಲಿ ಪಡೆಯುತ್ತಿದೆ. ಕೆಲ ದಿನಗಳ ಹಿಂದೆ ಕಾಂಚಳ್ಳಿ ಗ್ರಾಮದಲ್ಲಿ ಮೇಕೆಯೊಂದನ್ನು ತಿಂದು ಹಾಕಿತ್ತು. ರಾತ್ರಿ ವೇಳೆ ಜಮೀನಿನಲ್ಲಿರುವ ಕೊಟ್ಟಿಗೆಗಳ ಮೇಲೆ ದಾಳಿ ನಡೆಸಿ ಮೇಕೆಗಳನ್ನು ತಿಂದು ಹಾಕುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net