ಚಿತ್ರನಟ ದಿ.ಅಂಬರೀಶ್ ಜನ್ಮದಿನ ಆಚರಣೆ

29 bannur 1
Published on

ಬನ್ನೂರು: ಪಟ್ಟಣದ ಎಸ್‌ಆರ್‌ಪಿ ರಸ್ತೆಯ ಕನ್ನಡ ಭುವನೇಶ್ವರಿ ಸನ್ನಿಧಿಯಲ್ಲಿ ಚಿತ್ರನಟ ದಿ.ಅಂಬರೀಶ್ ಅವರ 73ನೇ ಹುಟ್ಟು ಹಬ್ಬವನ್ನು ಪಟ್ಟಣದಲ್ಲಿ ಗುರುವಾರ ಆಚರಿಸಲಾಯಿತು.

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಅಂಬರೀಶ್ ಅವರು ನಟನೆಯ ಹೊರತಾಗಿ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯ ಜೀವನದಲ್ಲಿ ಹಲವಾರು ಮಜಲುಗಳನ್ನು ಕಂಡರು. ಎರಡೂ ಕ್ಷೇತ್ರಗಳಲ್ಲೂ ಉತ್ತಮವಾಗಿ ಸೇವೆ ಸಲ್ಲಿಸಿದರು ಎಂದು ಶ್ಲಾಘಿಸಿದರು.

ಅಂಬರೀಶ್ ಮತ್ತು ಅಭಿಷೇಕ್ ಅಭಿಮಾನಿ ಬಳಗದ ಅಧ್ಯಕ್ಷ ನಂದೀಶ್ ಮಾತನಾಡಿ, ಎಸ್‌ಆರ್‌ಪಿ ರಸ್ತೆಯ ಹಾಲಿನ ಡೇರಿ ಮುಂಭಾಗ ಅವರ ಪ್ರತಿಮೆ ಆನಾವರಣ ಮಾಡುವುದರ ಜತೆಗೆ ದೇವಾಲಯ ನಿರ್ಮಾಣ ಮಾಡಲಾಗುವುದು ಎಂದರು. ಉಪಾಧ್ಯಕ್ಷ ಪ್ರಸನ್ನ, ನಾಗೇಂದ್ರ, ಅಂಬರೀಶ್, ಆನಂದ್, ರವಿ, ವೆಂಕಟೇಶ್, ಮಹೇಂದ್ರ, ಜಗದೀಶ್, ರಘು, ಆನಂದ್, ಮರೀಗೌಡ, ಪ್ರಸನ್ನ, ಬಾಬು ನಂದನ್, ಅರಸು, ಪುಟ್ಟರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net