

ಬಾಗಲಕೋಟೆ: ಕಮತಗಿ ಪಟ್ಟಣದ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ೨೦೨೪ನೇ ಜನೆವರಿ ೬ ಮತ್ತು ೭ ರಂದು ನಡೆಯಲಿರುವ "ಬಾದಾಮಿ ಚಾಲುಕ್ಯ ಉತ್ಸವ-೨೦೨೪"ರ ಅಧಿಕೃತ ಲಾಂಛನವನ್ನು ಬಾಗಲಕೋಟೆಯ ಕನ್ನಡ ಸಂಸ್ಕೃತಿ ಇಲಾಖೆಯ ಕಲಾ ಭವನದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.
ಘದ ಅಧ್ಯಕ್ಷ ಎಮ್.ರಮೇಶ ಕಮತಗಿ ಮಾತನಾಡಿ ಉತ್ಸವದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಇಮ್ಮಡಿ ಪುಲಕೇಶಿ ಅವರ ಭಾವಚಿತ್ರ ಮೆರವಣಿಗೆ,ವೇದಿಕೆಯಲ್ಲಿ ಯುವ ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ, ಗಜಲ್ ಗೋಷ್ಠಿ, ವಚನ ಗೋಷ್ಠಿ, ವಿಚಾರ ಗೋಷ್ಠಿ,ರೈತಗೋಷ್ಠಿ,ಮಕ್ಕಳ ಕವಿಗೋಷ್ಠಿ,25ಪುಸ್ತಕಗಳ ಬಿಡುಗಡೆ, ಕಲಾ ಪ್ರದರ್ಶನ, ಹಾಸ್ಯ ಗೋಷ್ಠಿ, ನಾಟಕ ಪ್ರದರ್ಶನ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಗುವದು ಆದ್ದರಿಂದ ಎಲ್ಲರೂ ಜೊತೆಗೂಡಿ ಉತ್ಸವವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಸಂಧರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀಶೈಲ್ ಕರಿಶಂಕರಿ, ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ಆನಂದ ಧಲಬಂಜನ,ಹಿರಿಯ ಸಾಹಿತಿಗಳಾದ ಡಾ. ಪ್ರಕಾಶ ಖಾಡೆ,ಸಾಹಿತಿ ಡಾ. ಬಸವರಾಜ ಕುಂಬಾರ, ಪ್ರಾಚಾರ್ಯ ಅಶೋಕ ಕಂದಗಲ್, ಕನ್ನಡಪರ ಹೋರಾಟಗಾರ ಹಾಗೂ ವಕೀಲರಾದ ರಮೇಶ ಬದ್ನುರ್,ಬಾದಾಮಿಯ ವ್ಯಂಗ್ಯ ಚಿತ್ರಕಾರ ವೆಂಕಟೇಶ್ ಇನಾಮದಾರ, ಸಾಹಿತಿ ಪುಂಡಿಲಿಕ್ ಹಲಕುರ್ಕಿ,ಚಾಲುಕ್ಯ ಉತ್ಸವದ ಸಂಚಾಲಕರಾದ ಮುತ್ತು ಬಳ್ಳಾ,ಪತ್ರಕರ್ತ ಅಲ್ತಾಫ್ ಧಾರವಾಡ ಹಾಗೂ ಇತರರು ಇದ್ದರು.