ಚಾಲನೆ ಪ್ರಾತ್ಯಕ್ಷಿಕೆ ನೀಡುವಾಗ ಕಾರನ್ನು ಕೆರೆಗೆ ಹಾರಿಸಿದ ವ್ಯಕ್ತಿ

19sirsi8
Published on

ಶಿರಸಿ: ಲಘು ವಾಹನ ಚಾಲನಾ ಪರವಾನಿಗೆಗಾಗಿ ಚಾಲನಾ ಪ್ರಾತ್ಯಕ್ಷಿಕೆ ನೀಡುವಾಗ ಚಾಲಕನೋರ್ವ ಕಾರನ್ನು ಕೆರೆಯೊಳಗೆ ನುಗ್ಗಿಸಿದ ಘಟನೆ ಗುರುವಾರ ಇಲ್ಲಿನ ಆರ್​ಟಿಒ ಕಚೇರಿ ಬಳಿ ನಡೆದಿದೆ.

ಚಾಲನಾ ಪರವಾನಗಿಗೆ ಆರ್​ಟಿಒ ನಿರೀಕ್ಷಕರೆದುರು ಕಾರು ಚಾಲನೆ ಮಾಡುತ್ತಿದ್ದ ಸಿದ್ದಾಪುರದ ರಾಜು ನಾಯ್ಕ ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಇಲ್ಲಿನ ಆರ್​ಟಿಒ ಕಚೇರಿಯ ಪಕ್ಕದಲ್ಲಿನ ಬಶೆಟ್ಟಿಕೆರೆಗೆ ಹಾರಿಸಿದ್ದಾನೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ವಣವಾಗಿತ್ತು. ಸ್ಥಳದಲ್ಲಿದ್ದ ಕೆಲವರು ಕೆರೆಗೆ ಬಿದ್ದ ಕಾರನ್ನು ತಕ್ಷಣ ದಡಕ್ಕೆ ಎಳೆತಂದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ನಂತರ ಕ್ರೇನ್ ಮೂಲಕ ಕಾರನ್ನು ಮೇಲೆತ್ತಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net