ಚಾಲಕರ ಆರೋಗ್ಯ ತಪಾಸಣೆಗೆ ನಿರ್ಲಕ್ಷ್ಯ

2byd1
Published on

ಬ್ಯಾಡಗಿ: ಪಟ್ಟಣದ ಎಪಿಎಂಸಿಯ ಕೋಲ್ಡ್ ಸ್ಟೋರೇಜ್​ಗೆ ಹೊರಗಡೆಯಿಂದ ಬಂದು-ಹೋಗುವ ರೈತರ ಹಾಗೂ ವಾಹನ ಚಾಲಕರ ಆರೋಗ್ಯ ತಪಾಸಣೆ ನಡೆಸದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಸರ್ಕಾರ ರೈತರ ಉತ್ಪನ್ನಗಳಿಗೆ ತೊಂದರೆಯಾಗದಂತೆ ಸರಕು ಹೊತ್ತ ವಾಹನಗಳಿಗೆ ಅವಕಾಶ ಕಲ್ಪಿಸಿದೆ. ಬ್ಯಾಡಗಿ ಮಾರುಕಟ್ಟೆಯ ಕೋಲ್ಡ್ ಸ್ಟೋರೇಜ್​ಗೆ ಬಳ್ಳಾರಿ ಕಡೆಯಿಂದ ಬಹುತೇಕ ರೈತರು ಹಾಗೂ ವಾಹನ ಚಾಲಕ, ಕ್ಲೀನರ್​ಗಳು ಬಂದು ಹೋಗುತ್ತಿದ್ದಾರೆ. ಇವರಿಗೆ ಯಾವುದೇ ತಪಾಸಣೆ, ಸ್ಕ್ರೀನಿಂಗ್ ಮಾಡುತ್ತಿಲ್ಲ. ಅಲ್ಲದೆ, ಅವರು ಊಟ-ತಿಂಡಿಗಾಗಿ ಎಲ್ಲೆಡೆ ಓಡಾಡುತ್ತಿರುವುದು ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.

ದಿಢೀರ್ ಸಭೆ: ಬಳ್ಳಾರಿ ಕಡೆಯಿಂದ ರೈತರು ಹಾಗೂ ವಾಹನಗಳು ಬ್ಯಾಡಗಿಗೆ ಬಂದು- ಹೋಗುತ್ತಿರುವ ಸುದ್ದಿ ವಾಟ್ಸ್​ಆಪ್ ಹಾಗೂ ಫೇಸಬುಕ್​ನಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಎಪಿಎಂಸಿ ಹಾಗೂ ತಾಲೂಕು ಆರೋಗ್ಯ ಇಲಾಖೆ ಹಾಗೂ ಪುರಸಭೆ, ತಾಲೂಕಾಡಳಿತ ಕೋಲ್ಡ್ ಸ್ಟೋರೇಜ್ ವ್ಯವಸ್ಥಾಪಕರ ಸಭೆ ನಡೆಸಿತು. ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಪ್ರತಿದಿನ ಎಲ್ಲ ಮಾಹಿತಿ ಒದಗಿಸಬೇಕು. ಆರೋಗ್ಯ ಇಲಾಖೆ ತಪಾಸಣೆಗೆ ತಂಡ ರಚಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net