

ಬಾಗಲಕೋಟೆ: ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸಿöÃವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿದ್ದಾರೆ ಎಂದು ಬೀಳಗಿ ಕಲ್ಮಠ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಮಂಗಳವಾರ ಅಕ್ಕನ ಬಳಗದ ೮೭ ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವೈರಾಗ್ಯ ನಿಽ ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿ ಸಕಲ ಸುಖವನ್ನು ತ್ಯಜಿಸಿದ ಅಕ್ಕ ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ (ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಽಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ ಎಂದರು.
ನಿವೃತ್ತ ಉಪನ್ಯಾಸಕಿ ಡಾ.ಶ್ರೀಲತಾ ರಾವ್ ಮಾತನಾಡಿ, ತಾಯಂದಿರಿAದ ಮಾತ್ರ ನಮ್ಮ ಸಂಸ್ಕೃತಿ ಮುಂದಿನವರಿಗೆ ತಲುಪಲು ಸಾಧ್ಯ. ಮಹಿಳೆ ಮೊದಲು ಆ ದಿಶೆಯಲ್ಲಿ ಕಾರ್ಯೋನ್ಮುಖಳಾಗುವದು ಅಗತ್ಯ. ಅಕ್ಕನ ಬಳಗದವರು ಸಾಂಸ್ಕೃತಿಕ ಹರಿಕಾರಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಕ್ಕಮಹಾದೇವಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಂ.ವ್ಹಿ.ಭಾಜಪ್ಪನವರ ಮಾತನಾಡಿ, ಮಹಿಳೆ ಪ್ರತಿ ನಿತ್ಯ ಯೋಗಾಸನ, ಪ್ರಾಣಾಯಾಮ ಮಾಡುವುದು ರೂಢಿಸಿಕೊಂಡಲ್ಲಿ ಆರೋಗ್ಯವಂತಳು, ನಿರೋಗಿಯಾಗಿರಲು ಸಾಧ್ಯ ಎಂಬುದನ್ನು ವಿಸ್ತಾರವಾಗಿ ವಿವರಿಸಿದರು.
ಅಕ್ಕನ ರುದ್ರ ಬಳಗದ ಅಧ್ಯಕ್ಷೆ ರಾಜೇಶ್ವರಿ ಚರಂತಿಮಠ ಮಾತನಾಡಿದರು. ಅಕ್ಕನ ಬಳಗದ ಉಪಾಧ್ಯಕ್ಷೆ ಭಾಗ್ಯಶ್ರೀ ಎಂ. ಹಂಡಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ವ್ಹಿ. ಹಲಕುರ್ಕಿ, ಗೌರವಾಧ್ಯಕ್ಷೆ ಡಾ.ಅನಸೂಯ್ಯಾ ಬಿ. ಕೆರೂಡಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಅಧ್ಯಕ್ಷ ಜಿ.ಎನ್.ಪಾಟೀಲ, ಬಿವಿವಿ ಸಂಘದ ಆಡಳಿತಾಽಕಾರಿ ಡಾ.ವಿ.ಎಸ್. ಕಟಗಿಹಳ್ಳಿಮಠ, ಬಸವರಾಜ ಭಗವತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಎಸ್.ಪಾವಟೆ ಉಪಸ್ಥಿರಿದ್ದರು. ತ್ರಿವೇಣಿ ಕೊಲ್ಹಾರ ನಿರೂಪಿಸಿದರು. ಸರೋಜಿನಿ ಗಂಗಾವತಿ ಸ್ವಾಗತಿಸಿದರು. ಸುವರ್ಣ ಅಂಗಡಿ ವಂದಿಸಿದರು. ಗೀತಾ ದೇವಶೆಟ್ಟಿ ನಿರೂಪಿಸಿದರು.