ಚನ್ನಮ್ಮನ ಕಿತ್ತೂರಿನಲ್ಲಿ ರೈತರ ಅಹೋರಾತ್ರಿ ಪ್ರತಿಭಟನೆ

6kittur2
Published on

ಚನ್ನಮ್ಮನ ಕಿತ್ತೂರು: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿನ ರೈತರ ಅಹೋರಾತ್ರಿ ಪ್ರತಿಭಟನೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸ್ವಾಮೀಜಿಗಳು, ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳಿಂದ ಅಪಾರ ಬೆಂಬಲ ವ್ಯಕ್ತವಾಯಿತು. ನಿಚ್ಚಣಕಿ ಗ್ರಾಮದ ರೈತ ಮುಖಂಡ ಅಪ್ಪೇಶ ದಳವಾಯಿ ನೇತೃತ್ವದಲ್ಲಿ ರೈತರು ಬೈಕ್ ರ‌್ಯಾಲಿ ನಡೆಸಿದರು.

ಮುಖಂಡರಾದ ನಿಂಗಪ್ಪ ತಡಕೋಡ, ಪರ್ವೇಜ್ ಹವಾಲ್ದಾರ ನೇತತ್ವದಲ್ಲಿ ನೂರಾರು ಜನರು ವಿಶೇಷವಾಗಿ ಆಗಮಿಸಿದರು. ಪ್ರತಿಭಟನಾನಿರತ ರೈತರಿಗೆ ಪಟ್ಟಣದ ಮುಸ್ಲಿಮರು ಮಧ್ಯಾಹ್ನದ ಊಟೋಪಚಾರ ವ್ಯವಸ್ಥೆ ಕಲ್ಪಿಸಿದರು. ಮಾಜಿ ಸಚಿವ ಶಶಿಕಾಂತ ನಾಯಕ ಮಾತನಾಡಿ, ಟನ್ ಕಬ್ಬಿಗೆ 3,500 ರೂ. ದರ ನಿಗದಿಪಡಿಸಿದರೆ ಸಕ್ಕರೆ ಕಾರ್ಖಾನೆಗಳಿಗೆ ನಷ್ಟವಾಗಲ್ಲ ಎಂದರು.

ಹಿರೇಮುನವಳ್ಳಿಯ ಶಿವಪುತ್ರ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಮುಖಂಡರಾದ ಬಿಷ್ಠಪ್ಪ ಶಿಂಧೆ, ಎಂ.ಎ್.ಜಕಾತಿ, ಪ್ರವೀಣ ಸರದಾರ, ಅಪ್ಪೇಶ ದಳವಾಯಿ, ನಿಂಗಪ್ಪ ತಡಕೋಡ, ಬಸನಗೌಡ ಪಾಟೀಲ, ಶಿವನಸಿಂಗ ಮೊಕಾಶಿ, ಡಾ. ಜಗದೀಶ ಹಾರುಗೊಪ್ಪ, ಸಯ್ಯದ್ ಮನ್ಸೂರ್, ಪವಿತ್ರಾ ಹಿರೇಮಠ, ಪಡೆಪ್ಪ ಬೋಗೂರ, ಬಸವರಾಜ ಮೊಕಾಶಿ, ವಿಜಯಕುಮಾರ ಶಿಂಧೆ, ರಾಜು ದಳವಾಯಿ, ಶಂಕರ ಆಯಟ್ಟಿ, ಶುಭಾಸ ಪಾಟೀಲ, ಕೀರಪ್ಪ ಜಾಂಗಟಿ, ನಾಗಪ್ಪ ಅಸಲನ್ನವರ, ಅಶೋಕ ಅಳ್ನಾವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net