ಚಂದ್ರಯಾನ-3 ಯಶಸ್ವಿಗೆ ವಿಶೇಷ ಪೂಜೆ ಸಲ್ಲಿಕೆ

IMG-20230823-WA0210
ಚಂದ್ರಯಾನ-3 ಯಶಸ್ವಿ ಆಗಲೆಂದು ಆಲೂರಿನ ಇತಿಹಾಸ ಪ್ರಸಿದ್ಧ ಅಡಿಬೈಲು ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಆರ್‌ಎಸ್‌ಎಸ್ ಮುಖಂಡ ಅನಿಲ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
Published on

ಆಲೂರು: ಭಾರತದ ಚಂದ್ರಯಾನ-3 ಯಶಸ್ವಿ ಆಗಲೆಂದು ತಾಲೂಕಿನ ಕೆ.ಹೊಸಕೋಟೆ ಹೋಬಳಿ ಆರ್‌ಎಸ್‌ಎಸ್ ಮುಖಂಡ ಅನಿಲ್ ಅವರ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಅಡಿಬೈಲು ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅನಿಲ್ ಮಾತನಾಡಿ, 23ರಂದು ಸಂಜೆ 6.04ರ ಸುಮಾರಿಗೆ ಚಂದ್ರನ ಮೇಲೆ ಲ್ಯಾಂಡರ್ ಮಾಡ್ಯೂಲ್-ವಿಕ್ರಮ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯಲಿದೆ. ಹೀಗಾಗಿ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಗುರಿ ತಲುಪಲೆಂದು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸರ್ವಸಿದ್ಧಿ ಯಾಗವನ್ನು ಶಾಸ್ತ್ರೋಕ್ತವಾಗಿ ವಿಶೇಷ ಹೋಮ ಹವನ ನಡೆಸಲಾಗಿದೆ ಎಂದು ತಿಳಿಸಿದರು.

ದೇವಾಲಯದ ಅರ್ಚಕರಾದ ಲಕ್ಷ್ಮೀನಾರಾಯಣ, ಶಾಂತಾ ನಾರಾಯಣ, ಆರ್‌ಎಸ್‌ಎಸ್ ಮುಖಂಡರಾದ ಚೇತನ್ ಮೆಡಿಕಲ್, ರಘು ರಮ್ಯ, ಶೇಖರ್, ದೇವರಾಜ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net