

ಕಲಬುರಗಿ: ಚಂದ್ರಯಾನ-೩ ನೌಕೆಯು ಚಂದ್ರನ ದಕ್ಷಿಣ ಧ್ರುವದ ಕಕ್ಷೆಗೆ ಯಶಸ್ವಿಯಾಗಿ ಇಳಿದು ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದ ಬೆನ್ನಲ್ಲೇ ತೊಗರಿ ನಾಡು ಕಲಬುರಗಿ ಸೇರಿ ಜಿಲ್ಲೆಯ ಎಲ್ಲೆಡೆ ಸಂಭ್ರಮ ಎಲ್ಲೆ ಮೀರಿತ್ತು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಅನೇಕರು ಸಿಹಿ ಹಂಚಿ ಖುಷಿಪಟ್ಟರು. ವಿಕ್ರಮ್ ಲ್ಯಾಂಡಿAಗ್ ಯಶಸ್ವಿಯಾಗಲಿ ಎಂದು ಬೆಳಗ್ಗೆಯಿಂದಲೂ ಅನೇಕ ಕಡೆಗಳಲ್ಲಿ ದೇವರ ಮೊರೆ ಹೋಗಿದ್ದವರ ಖುಷಿಗೆ ಪಾರವೇ ಇರಲಿಲ್ಲ.
ವಿಕ್ರಮ್ ನೌಕೆ ಸಂಜೆ ೬.೦೪ಕ್ಕೆ ಚಂದ್ರನ ಚುಂಬಿಸುತ್ತಿದ್ದAತೆ ಎಲ್ಲೆಡೆ ಹರ್ಷೋದ್ಗಾರವೇ ಮೊಳಗಿತು. ನಗರದ ಜಿಲ್ಲಾ ವಿಜ್ಞಾನ ಕೇಂದ್ರ, ಶರಣಬಸವ ವಿಶ್ವವಿದ್ಯಾಲಯ, ವಿ.ಜಿ.ಮಹಿಳಾ ಮಹಾವಿದ್ಯಾಲಯ, ಗುವಿವಿಯಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಲ್ಯಾಂಡಿAಗ್ ನೇರ ಪ್ರಸಾರ ನೋಡುತ್ತ ಕುಳಿತಿದ್ದವರು ಲ್ಯಾಂಡಿAಗ್ ಸಕ್ಸಸ್ ಎನ್ನುತ್ತಲೇ ಕುಣಿದು ಕುಪ್ಪಳಿಸಿದರು. ಚÀಪ್ಪಾಳೆ ತಟ್ಟಿ ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿದರು. ಇಸ್ರೋ ಗ್ರೇಟ್, ಇಂಡಿಯಾ ಗ್ರೇಟ್ ಎಂದು ಘೋಷಣೆ ಹಾಕಿದರು.
ನಗರದ ಆನಂದ ವೃತ್ತದಲ್ಲಿ ಡಾ.ರಾಜು ಕುಳಗೇರಿ ನೇತೃತ್ವದಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡರಾದ ಆನಂದ ನಂದೂರಕರ್, ಸುರೇಶ ಪಾಟೀಲ್ ಜೋಗೂರ, ದವಲತ್ತರಾಯಗೌಡ ಪಾಟೀಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಸೇರಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು. ಜಿಲ್ಲೆಯ ಎಲ್ಲ ತಾಲೂಕು, ಪಟ್ಟಣ, ಹಳ್ಳಿಗಳಲ್ಲಿ ಸಹ ಜನರು ಅಮೋಘ ಸಾಧನೆಗೆ ಸಂಭ್ರಮಿಸಿದರು.
ಅಪ್ಪನ ಗುಡಿಯಲ್ಲಿ ವಿಶೇಷ ಪೂಜೆ
ನಾಡಿನ ಆರಾಧ್ಯ ದೈವ ನಗರದ ಮಹಾದಾಸೋಹಿ ಶರಣಬಸವೇಶ್ವರರ ದೇವಾಲಯದಲ್ಲಿ ಚಂದ್ರಯಾನ ಯಶಸ್ವಿಗಾಗಿ ವಿಶೇಷ ಪೂಜೆ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಹಾಗೂ ೯ ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ನೇತೃತ್ವದಲ್ಲಿ ಜರುಗಿತು. ಮಾತೋಶ್ರೀ ದಾಕ್ಷಾಯಿಣಿ ಅಪ್ಪ, ಶರಣಬಸವ ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ, ಕುಲಸಚಿವ ಅನಿPಲÀÄಮಾರ ಬಿಡವೆ, ಪ್ರಮುಖರಾದ ಶರಣು ಪಪ್ಪಾ, ಬಸವರಾಜ ದೇಶಮುಖ, ಮಾಲಾ ದಣ್ಣೂರ, ಲಕ್ಷಿö್ಮÃ ಪಾಟೀಲ್ ಮಾಕಾ ಇತರರಿದ್ದರು.