ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಬದ್ಧ

16Anand6
Published on

ಬೆಳಗಾವಿ: ದಿ.ಅಪ್ಪಣ್ಣಗೌಡ ಪಾಟೀಲರ ಪೆನಲ್ ಬೆಂಬಲಿಸಿ ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಸಹಕಾರ ಸಂಘ ಅಭಿವೃದ್ಧಿ ಪಥದತ್ತ ಸಾಗುವುದಲ್ಲದೇ ಗ್ರಾಹಕರಿಗೆ ಉತ್ತಮ ದರ್ಜೆಯ ಸೇವೆ ನೀಡಲಿಕ್ಕೆ ನಾವೆಲ್ಲರೂ ಬದ್ಧರಿದ್ದೇವೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭರವಸೆ ನೀಡಿದರು.

ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ಈಚೆಗೆ ಜರುಗಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ವಿದ್ಯುತ್ ಸಂಘದ ಚುನಾವಣೆಯಲ್ಲಿ ನಮ್ಮ ಪೆನಲ್ ಬೆಂಬಲಿಸಿದರೆ, ತಮ್ಮ ಸೇವೆಗೆ ಸದಾ ಸಿದ್ಧರಿದ್ದು, ವಿದ್ಯುತ್ ಪರಿವರ್ತಕಗಳನ್ನು ಪಡೆಯಲು ತಿಂಗಳುಗಟ್ಟಲೇ ಬಾಗೇವಾಡಿಗೆ ಅಲೆಯಬೇಕಿತ್ತು. ಮೂವತ್ತು ವರ್ಷಗಳಿಂದ ಒಂದು ಕುಟುಂಬಕ್ಕೆ ಅಧಿಕಾರ ನೀಡಿರುವ ನೀವು ಒಂದು ಸಲ ನಮಗೆ ಅಧಿಕಾರ ಕೊಟ್ಟು ನೋಡಿ. ನಿಮ್ಮ ಸಮಸ್ಯೆಗಳಿಗೆ 24 ಗಂಟೆಗಳಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಭಾಗದ ವಿದ್ಯುತ್ ಸಮಸ್ಯೆಗಳ ನಿವಾರಣೆಗಾಗಿ ಎಲಿಮುನ್ನೋಳಿ ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಪ್ರಾಯೋಗಿಕ ಯೋಜನೆ ತಲೆ ಎತ್ತಲಿದೆ. ಇದರಿಂದ ಅನೇಕ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಈಗಾಗಲೇ 3 ತಿಂಗಳೊಳಗೆ ಸುಮಾರು ನೂರು ವಿದ್ಯುತ್ ಪರಿವರ್ತಕಗಳನ್ನು ವಿತರಿಸಿದ್ದೇವೆ. ನಿರಂತರ ಜ್ಯೋತಿ ಸಂಪರ್ಕವನ್ನು ಕಲ್ಪಿಸಿಕೊಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.

ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಮ್ಮನ್ನು ಲಿಂಗಾಯತ ವಿರೋಧಿ ಎಂಬಂತೆ ಕೆಲ ಬಿಂಬಿಸುತ್ತಿದ್ದಾರೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದ್ದರಿಂದ ಮನಸ್ಸಿಗೆ ನೋವಾಗುತ್ತಿದೆ. ನಮ್ಮ ರಾಜಕೀಯ ಇತಿಹಾಸದಲ್ಲಿ ನಾವು ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ ಎಂದರು.

ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಾ ಶುಗರ್ಸ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಶಶಿರಾಜ ಪಾಟೀಲ, ರಾಜೇಂದ್ರ ಅಂಕಲಗಿ, ಸುರೇಶ ಹುಣಶ್ಯಾಳ, ಬಂಡು ಹತನೂರೆ, ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ ಇತರರಿದ್ದರು.

| ಬಾಲಚಂದ್ರ ಜಾರಕಿಹೊಳಿ ಶಾಸಕ

ಹುಕ್ಕೇರಿಯಲ್ಲಿ ಗೋಕಾಕ ಸ್ಟೈಲ್ ರಾಜಕಾರಣ ನಡೆಯುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಿಜ. ನಾನು ಪ್ರತಿ ಮದುವೆ, ಮುಂಜಿ, ಗಹಪ್ರವೇಶ, ಮತ್ತಿತರ ಶುಭ ಕಾರ್ಯಗಳಿಗೆ ಸ್ವಂತ ಜೇಬಿನಿಂದ ಹಣವನ್ನು ನೀಡುತ್ತಿದ್ದೇನೆ. ಇದು ನಿಮ್ಮಿಂದ ಸಾಧ್ಯನಾ, ನಮ್ಮ ಗೋಕಾಕ ಸ್ಟೈಲ್ ರಾಜಕೀಯ ಆರಂಭಿಸಿದರೆ ಇಲ್ಲಿಯೂ ನಿಮ್ಮ ಆಟ ನಡೆಯುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net