ಗ್ರಾಮೀಣ ಕ್ರೀಡಾಪಟು ಯು.ಲಿಖಿತಾಗೆ ಸನ್ಮಾನ

SRP _26-01jpg
Published on

ಶ್ರೀರಂಗಪಟ್ಟಣ: ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳೆಯರ ಟೆನಿಕಾಯ್ಟ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಜಿಲ್ಲೆಯ ಗ್ರಾಮೀಣ ಕ್ರೀಡಾಪಟು ಯು.ಲಿಖಿತಾ ಅವರನ್ನು ಮಂಡ್ಯ ಜಿಲ್ಲಾ ಕಬಡ್ಡಿ ಆಟಗಾರರ ಒಕ್ಕೂಟದಿಂದ ಸನ್ಮಾನಿಸಲಾಯಿತು.


ಪಟ್ಟಣದ ವೆಲ್ಲೆಸ್ಲಿ ಸೇತುವೆ ಸಮೀಪದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಕ್ರೀಡಾಪಟು ಯು.ಲಿಖಿತಾ ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ನೆರೆದಿದ್ದವರು, ವಿದೇಶಕ್ಕೆ ತೆರಳುತ್ತಿರುವ ಆಕೆಯ ಪ್ರಯಾಣ ಖರ್ಚು ವೆಚ್ಚಕ್ಕೆ ಸಹಕಾರಿಯಾಗಲು ಆರ್ಥಿಕ ಸಹಾಯ ನೀಡಿ ಶುಭ ಹಾರೈಸಿದರು.


ಸನ್ಮಾನ ಸ್ವೀಕರಿಸಿದ ಕ್ರೀಡಾಪಟು ಲಿಖಿತಾ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪಾಲಕರ ಪ್ರೋತ್ಸಾಹ ಪ್ರಮುಖ ಕಾರಣ. ನನ್ನ ತಂದೆ ಉಮೇಶ್ ಕಬಡ್ಡಿ ಆಟಗಾರರಾಗಿದ್ದು ಅವರ ಪ್ರೇರಣೆಯಿಂದ ತರಬೇತುದಾರ ವಿವೇಕಾನಂದ ಹಾಗೂ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಟೆನಿಕಾಯ್ಟ ಆಯ್ಕೆ ಮಾಡಿಕೊಂಡು ಭಾರತ ತಂಡವನ್ನು ಪ್ರತಿನಿಧಿಸಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದೇನೆ ಎಂದರು.

ಇತಿಹಾಸ ಉಪನ್ಯಾಸಕ ಪ್ರೊ. ನರಸಿಂಹಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಬಡ್ಡಿ ಆಟಗಾರ ಪಾಂಡವಪುರ ಜಗದೀಶ್, ಡಾ.ದೇವರಾಜು, ಕೆ ಶೆಟ್ಟಹಳ್ಳಿ ಶಿವರಾಮು, ಕೂಡಲಕುಪ್ಪೆ ಮಹಾದೇವು, ಲಿಖಿತಾ ಪಾಲಕರಾದ ಅನುಪಮಾ, ಉಮೇಶ್, ಹಿರಿಯ ಕಬಡ್ಡಿ ಆಟಗಾರರಾದ ಎಣ್ಣೆಹೊಳೆ ಕೊಪ್ಪಲು ಮೋಹನ್, ನೆಲಮನೆ ಡಿ.ಶ್ರೀಕಂಠೇಗೌಡ, ಬಲ್ಲೇನಹಳ್ಳಿ ಬಾಲಸುಬ್ರಹ್ಮಣ್ಯ, ಅಡುಗೆ ಕಂಟ್ರಾೃಕ್ಟರ್ ಚಂದಗಿರಿ ಕೊಪ್ಪಲ್ ರಾಜೇಶ್, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಮಂಡ್ಯ ಜಿಲ್ಲಾ ಕುಸ್ತಿ ಫೆಡರೇಷನ್ ಅಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಮಲ್ಲುಸ್ವಾಮಿ, ಪರಮೇಶ್, ಶ್ರೀನಿವಾಸ್, ಮಧುಸೂದನ್ ಸೇರಿದಂತೆ ಇತರರು ಹಾಜರಿದ್ದರು.

ಎಸ್‌ಆರ್‌ಪಿ ಚಿತ್ರ :27-01
ಶ್ರೀರಂಗಪಟ್ಟಣದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾತನಹಳ್ಳಿ ಗ್ರಾಮದ ಕ್ರೀಡಾಪಟು ಯು.ಲಿಖಿತಾ ಅವರನ್ನು ಸನ್ಮಾನಿಸಲಾಯಿತು.ಪ್ರೊ. ನರಸಿಂಹಸ್ವಾಮಿ,ಪಾಂಡವಪುರ ಜಗದೀಶ್, ಡಾ.ದೇವರಾಜು, ಕೆ ಶೆಟ್ಟಹಳ್ಳಿ ಶಿವರಾಮು, ಕೂಡಲಕುಪ್ಪೆ ಮಹಾದೇವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net