ಗ್ರಾಮದೇವತೆ ಜಾತ್ರೆ ಆರಂಭ

21-hvr-09
Published on

ಹಾವೇರಿ: 115 ವರ್ಷಗಳ ನಂತರ ನಡೆಯುತ್ತಿರುವ ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರ ಆರಂಭಗೊಂಡಿತು.

ಬೆಳಗ್ಗೆ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಅರ್ಚಕರಾದ ದೊಡ್ಡದ್ಯಾಮಣ್ಣ ಬಡಿಗೇರ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಚನ್ನಪ್ಪ ಬಾಲೇಹೊಸೂರ ದಂಪತಿ ದ್ಯಾಮವ್ವ ದೇವಿ ಮಹಿಳಾ ಭಕ್ತರಿಗೆ ಪಡ್ಲಿಗೆ ತುಂಬಿದರು. ನಂತರ ಜೋಳದಿಂದ ರಂಗಾ ಮತ್ತು ಅಂಕಿ ಹಾಕಲಾಯಿತು.

ದ್ಯಾಮವ್ವದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಹೂಗಾರ, ಕಾರ್ಯದರ್ಶಿ ಅಶೋಕ ಮುದಗಲ್ಲ, ಗೌರವ ಕಾರ್ಯದರ್ಶಿ ಗಂಗಾಧರ ಹೂಗಾರ, ಸದಸ್ಯರಾದ ಕೊಟ್ರಯ್ಯ ಕಬ್ಬಿನಕಂತಿಮಠ, ಬಸಪ್ಪ ಮುಗದೂರ, ಹನುಮಂತನಾಯ್ಕ ಬದಾಮಿ, ಪೃಥ್ವಿ ಬೆಟಗೇರಿ, ಕಿರಣ ಕೊಳ್ಳಿ, ಕೊಟೆಪ್ಪ ಕಮ್ಮಾರ, ಪ್ರದೀಪ ದೊಡ್ಡಗೌಡರ, ಬೆಟ್ಟಪ್ಪ ಕುಳೇನೂರ, ಪ್ರಕಾಶ ಉಜ್ಜನಿಕೊಪ್ಪ ಹಾಗೂ ಯುವಕ ಮಂಡಳದ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net