

ಬಾಗಲಕೋಟೆ: ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಡಿ.೨೧ ರಿಂದ ೩೦ ವರೆಗೆ ಹಮ್ಮಿಕೊಂಡ ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮದ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಕುರಿತ ಗ್ರಾಮ ಸಂಪರ್ಕ ಕಾರ್ಯಕ್ರಮಕ್ಕೆ ಜಿಲ್ಲಾ ವಾರ್ತಾಽಕಾರಿ ಕಸ್ತೂರಿ ಪಾಟೀಲ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಾರ್ತಾಽಕಾರಿ ಕಸ್ತೂರಿ ಪಾಟೀಲ, ಕ್ಷೇತ್ರ ಪ್ರಚಾರ ಕಾರ್ಯಕ್ರಮದಲ್ಲಿ ಬಾದಾಮಿ ತಾಲೂಕಿನ ಗೋವನಕೊಪ್ಪದ ಕಾವೇರಿ ಕಲಾತಂಡದವರು ಬೀದಿ ನಾಟಕದ ಮೂಲಕ ಪ್ರಚಾರ ಕಾರ್ಯ ಕೈಗೊಂಡರೆ, ಮುಧೋಳನ ದುರ್ಗಾದೇವಿ ಜನಪದ ಕಲಾ ತಂಡದವರು ಜಾನಪದ ಸಂಗೀತದ ಮೂಲಕ ಸರ್ಕಾರ ವಿವಿಧ ಯೋಜನೆಗಳ ಬಗ್ಗೆ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಡಿ.೨೧ ರಂದು ಮುಚಖಂಡಿ, ನೀರಲಕೇರಿ, ೨೨ ರಂದು ಮಲ್ಲಾಪೂರ, ಬೇವಿನಮಟ್ಟಿ, ೨೩ ರಂದು ಕಿರಸೂರ, ಭಗವತಿ, ೨೪ ರಂದು ದುರ್ಗಾದೇವಿನಗರ, ಶಿಗಿಕೇರಿ, ೨೫ ರಂದು ಛಬ್ಬಿ, ಯಡಹಳ್ಳಿ, ೨೬ ರಂದು ಗದ್ದನಕೇರಿ ಎಲ್.ಟಿ, ಗದ್ದನಕೇರಿ, ೨೭ ರಂದು ಮುರನಾಳ, ವೀರಾಪೂರ, ೨೮ ರಂದು ಕೇಸನೂರ, ಬನ್ನಿದಿನ್ನಿ, ೨೯ ರಂದು ದೇವನಾಳ, ಹಿರೇಸಂಶಿ, ೩೦ ರಂದು ಚಿಕ್ಕಸಂಶಿ, ಸೊಕನಾದಗಿ ಗ್ರಾಮದಲ್ಲಿ ಗ್ರಾಮ ಸಂಪರ್ಕ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಭರತಕುಮಾರ, ಮಧುಸೂದನ ಭಜಂತ್ರಿ, ಭೀಮನಗೌಡ ಹೊಸಮನಿ, ಮುತ್ತು ಹಳ್ಳದ ಸೇರಿದಂತೆ ಇತರರು ಉಪಸ್ಥಿತರಿದ್ದರು, ಪ್ರಾರಂಭದಲ್ಲಿ ಮುಚಖಂಡಿ ಮತ್ತು ನೀರಲಕೇರಿಯಲ್ಲಿ ಬೀದಿನಾಟಕ ಹಾಗೂ ಜನಪದ ಸಂಗೀತ ಕಾರ್ಯಕ್ರಮ ಜರುಗಿತು.