ಗ್ರಾಮ ವಾಸ್ತವ್ಯ ತೃಪ್ತಿ ತಂದಿದೆ

bkt-26-1 a
ಬಾಗಲಕೋಟೆ ತಾಲೂಕಿನ, ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಕಲಾದಗಿ ಗ್ರಾಮದ ಕಲ್ಲೊಳ್ಳೆಪ್ಪ ಮಾದರ ಮನೆಯಲ್ಲಿ ಉಪಹಾರ ಸವಿದ ಬಳಿಕ ಸಚಿವರಾದ ಆರ್.ಅಶೋಕ, ಮುರುಗೇಶ ನಿರಾಣಿ ಕುಟುಂಬಸ್ಥರಿಗೆ ಧನ್ಯವಾದ ಅರ್ಪಿಸಿದರು.
Published on

ಬಾಗಲಕೋಟೆ: ಗ್ರಾಮ ವಾಸ್ತವ್ಯ ಕಾರ್ಯಕ್ರಮ ತೃಪ್ತಿ ತಂದಿದೆ. ಇದೊಂದು ಅಪರೂಪ ಕ್ಷಣಗಳು. ಜನ ಸಾಮಾನ್ಯರ ಕಷ್ಟ, ಸಮಸ್ಯೆ ಅರಿಯಲು ಸಾಧ್ಯವಾಯಿತು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಗ್ರಾಮ ವಾಸ್ತವ್ಯದ ನಂತರ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು, ಮಧ್ಯಮ ವರ್ಗದ ಕುಟುಂಬದೊಂದಿಗೆ ಬೇರೆಯುವುದೇ ಒಂದು ಖುಷಿ ಸಂಗತಿ. ನಾನು ಅಧಿಕಾರದಲ್ಲಿ ಇರ್ತಿನೋ ಇಲ್ಲೋ ಗೊತ್ತಿಲ್ಲ. ಅಽಕಾರ ಇದ್ದಾಗ ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಕಲಾದಗಿ ಗ್ರಾಮದ ಮುಳಗಡೆ ಸಮಸ್ಯೆ ಇತ್ಯರ್ಥ ಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸಚಿವ ಮುರುಗೇಶ ನಿರಾಣಿ ತಮ್ಮ ಗ್ರಾಮದ ಬಗ್ಗೆ ಕಾಳಜಿ ಹೊಂದಿದ್ದಾರೆ. ಹೆಚ್ಚುವರಿ ೫೦೦ ಎಕರೇ ಭೂಮಿ ನೀಡಲು ತಿಳಿಸಿದ್ದು, ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದರು.

ಗ್ರಾಮದ ಸಮಸ್ಯೆ ಹರವಿದ ಮುಖಂಡರು:
ಸಚಿವ ಆರ್.ಅಶೋಕ, ಮುರಗೇಶ ನಿರಾಣಿ ಉಪಹಾರ ಸವಿಯುತ್ತಿರುವ ಸಂದರ್ಭದಲ್ಲಿ ಗ್ರಾಮದ ಮುಖಂಡ ಶಿವಣ್ಣ ಅಂಗಡಿ, ಒಂದು ಕಾಲಕ್ಕೆ ಕಲಾದಗಿ ಗ್ರಾಮ ಜಿಲ್ಲೆಯಾಗಿತ್ತು. ಇದೀಗ ತಾಲೂಕಾ ಆಗಿಲ್ಲ. ಅಭಿವೃದ್ಧಿ ಮರೀಚಿಕೆ ಆಗಿದೆ. ಮುಳಗಡೆಯಿಂದ ಬದುಕು ಮತ್ತಷ್ಟು ಹೈರಾಣ ಆಗಿಸಿದೆ. ಸಂತ್ರಸ್ತರಿಗೆ ಪುನರ್ ವಸತಿ ಸಮರ್ಪಕವಾಗಿ ಕಲ್ಪಿಸಬೇಕು. ಕಲಾದಗಿ ಗ್ರಾ.ಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು. ಇಲ್ಲೊಂದು ಪ್ರತ್ಯೇಕ ಸಬ್ ರಿಸ್ಟರ್ ಕಚೇರಿ ಆರಂಭಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಚಿವ ಮುರುಗೇಶ ನಿರಾಣಿ, ಜನ ಸಂಖ್ಯೆ ಆಧಾರದ ಮೇಲೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ೨೦೧೧ ಸೆನಸೆಕ್ಸ್ ಪ್ರಕಾರ ಕಡಿಮೆ ಸಂಖ್ಯೆ ಇತ್ತು. ೨೦೨೧ ಸಂಖ್ಯೆ ಪ್ರಕಾರ ಬರುತ್ತದೆ. ಮುಂದಿನ ವರ್ಷ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೆಚ್ಚುವರಿ ಭೂಮಿ ಪಡೆದು ಎಲ್ಲ ಸಂತ್ರಸ್ತರಿಗೂ ನಿವೇಶನ ಹಂಚಿಕೆ ಮಾಡಲಾಗುವುದು. ಗ್ರಾಮದ ಅಭಿವೃದ್ಧಿಗೆ ಬದ್ಧ ಇದ್ದೇನೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net