

ಮದ್ದೂರು: ತಾಲೂಕಿನ ಹೊಸಕರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಸುನೀತಾ ಕಾಳೇಗೌಡ ಅವಿರೋಧ ಆಯ್ಕೆಯಾದರು.
ಶೃತಿ ರವಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗಯಾಗಿತ್ತು. ಸುನೀತಾ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ಸಿಡಿಪಿ ನಾರಾಯಣ್ ಅವಿರೋಧ ಆಯ್ಕೆ ಪ್ರಕಟಿಸಿದರು. ನೂತನ ಅಧ್ಯಕ್ಷರನ್ನು ಸದಸ್ಯರು, ಸ್ಥಳೀಯ ಮುಖಂಡರು ಅಭಿನಂದಿಸಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷೆ ಸುನೀತಾ, ಬೇಸಿಗೆ ಸಮೀಪಿಸುತ್ತಿದ್ದು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಡಕಾಗದಂತೆ ಅಗತ್ಯ ಕ್ರಮ ವಹಿಸುತ್ತೇನೆ. ಅಧಿಕಾರಿಗಳು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಿ ನರೇಗಾ ಯೋಜನೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷೆ ನಿರ್ಮಲಾ ಕೆಂಪಬೋರಯ್ಯ, ಸದಸ್ಯರಾದ ಎಚ್.ಎಲ್.ದಯಾನಂದ, ಎಸ್.ಗಾಯತ್ರಿ, ಎ.ಟಿ.ಕೃಷ್ಣ, ಮಂಗಳಮ್ಮ, ಎನ್.ಕೆ.ಮಂಜುಳಾ, ಅನಂತರಾಮು, ಬಿ.ಎಸ್.ಪ್ರಸನ್ನಕುಮಾರ್, ನಳಿನಿಕುಮಾರಿ, ತಾಯಮ್ಮ, ರಘುನಂದನ್, ಜಯರತ್ನಾ, ವೆಂಕಟೇಶ್, ಶಾಂತಾ, ಶಿವಲಿಂಗಯ್ಯ, ಎಚ್.ಟಿ.ವಿನೋದ್‌ಕುಮಾರ್, ಮುಖಂಡರಾದ ಬೆಳತ್ತೂರು ಚಂದ್ರಹಾಸ, ಮಲ್ಲರಾಜು, ಶಿವಪ್ಪ, ಪ್ರಭು, ಮನು, ಶಿವಣ್ಣ, ಪಿಡಿಒ ಬಾಲಾಜಿ ಇತರರಿದ್ದರು.