

ಬಾಗಲಕೋಟೆ: ದಲಿತರ ಅಭಿವೃದ್ಧಿಗೆಂದು ಮೀಸಲು ಇರುವ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ದುರ್ಬಳಿಕೆ ಮಾಡಿಕೊಂಡಿದೆ. ಆ ಮೂಲಕ ಕಾಂಗ್ರೆಸ್ ಪಕ್ಷ ದಲತರಿಗೆ ಮೋಸ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪುರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಬಿಜೆಪಿ ಹಿರಿಯ ಮುಖಂಡರ ಜೊತೆ ಸೇರಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶÀಹಪುರ, ಸಿದ್ದರಾಮಯ್ಯ ಅವರು ಈಗಾಗಲೇ ಎರಡು ಬಜೆಟ್ ಗಳಲ್ಲಿ ಇಡಲಾಗಿದ್ದ ದಲಿತರ ಮೀಸಲು ನಿಽಯಲ್ಲಿ ಅಂದಾಜು ೨೫ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ವರ್ಗಾವಣೆ ಮಾಡಿದೆ. ಸದ್ಯ ಬರುವ ಬಜೆಟ್‌ನಲ್ಲಿ ಮತ್ತೆ ಸುಮಾರು ೧೪ ಸಾವರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಲು ಹೊಂಚು ಹಾಕಿ ಕುಳಿತಿದೆ. ಈ ಬಗ್ಗೆ ಬಿಜೆಪಿ ಜನಾಂದೋಲನ ನಡೆಸಲಿದೆ ಎಂದರು.
ಗ್ಯಾರAಟಿಗಳು ಎಲ್ಲ ವರ್ಗದವರಿಗೆ ಇದ್ದು, ದಲಿತರಿಗೆ ಮಾತ್ರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಕಾಂಗ್ರೆಸ್ ದ್ರೋಹ ಮಾಡುತ್ತಿದೆ. ಕಾಂಗ್ರೆಸ್ ಎಂದರೆ ಸುಳ್ಳು, ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತ ಬಂದಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಿಲ್ಲ, ಮಾಡಿದ್ದಾರೆ ಎಂದರೆ ಅಂದು ವಿರೋಧ ಪಕ್ಷವಾಗಿ ಈ ಬಗ್ಗೆ ಧ್ವನಿ ಎತ್ತಲಿಲ್ಲ ಏಕೆ? ಒಟ್ಟಾರೆ, ಕಾಂಗ್ರೆಸ್ ಪಕ್ಷ ಅಽಕಾರದಲ್ಲಿ ಇದ್ದಾಗ್ಯೂ ಹಾಗೂ ವಿರೋಧ ಪಕ್ಷದಲ್ಲಿ ಇದ್ದಾಗಲೂ ದಲಿತರಿಗೆ ಮೋಸ ಮಾಡುವುದು ಮಾತ್ರ ಬಿಟ್ಟಿಲ್ಲ ಎಂದು ಜರಿದ, ಶಹಪುರ, ದಲಿತ ಮಕ್ಕಳಿಗೆ ಶಿಕ್ಷಣ, ಅವರು ವಾಸಿರುವ ಕಾಲೋನಿಗಳಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರದಲ್ಲಿ ಅನುದಾನ ಇಲ್ಲ. ದುಡ್ಡು ಇಲ್ಲದ ಕಾರಣಕ್ಕೆ ಗಂಗಾ ಕಲ್ಯಾಣ ಯೋಜನೆ ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ದಲಿತರ ಮೀಸಲು ನಿಽಯನ್ನು ವರ್ಗಾವಣೆ ಮಾಡಲೆಂದೇ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ದಲಿತರ ಅಭಿವೃದ್ಧಿಗಾಗಿ ಮೀಸಲು ಹಣವನ್ನು ಬಳಕೆ ಮಾಡಬೇಕೆ ವಿನಃ ಅದನ್ನು ವರ್ಗಾವಣೆ ಮಾಡಬಾರದು. ಅವರಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
ತೇರದಾಳ ಶಾಸಕ ಸಿದ್ದು ಸವದಿ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಬಸವರಾಜ ಯಂಕAಚಿ, ಮುತ್ತಣ್ಣ ಬೆಣ್ಣೂರ, ಸತ್ಯನಾರಾಯಣ ಹೇಮಾದ್ರಿ ಸೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.