ಗ್ಯಾರಂಟಿ ಯೋಜನೆಗಳ ಮಾಹಿತಿ ಪ್ರದರ್ಶನ

bkt-11-1
Published on

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾನಗಿರಿಯಲ್ಲಿ ನಡೆದ ತೋಟಗಾರಿಕೆ ಮೇಳದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಮಪರ್ಕ ಇಲಾಖೆ ಹಮ್ಮಿಕೊಂಡ ವಸ್ತು ಪ್ರದರ್ಶನವು ಮೇಳಕ್ಕೆ ಆಗಮಿಸಿದ ಜನರನ್ನು ಆಕರ್ಷಿಸುವಂತೆ ಮಾಡಿತು.

ಪ್ರದರ್ಶನ ಮಳಿಗೆ ಮುಂಬಾಗದಲ್ಲಿ ಅನ್ನಭಾಗ್ಯ ಯೋಜನೆ, ಯುವನಿಧಿ ಹಾಗೂ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷಿö್ಮ ಯೋಜನೆಗಳನ್ನು ಬಿಂಬಿಸುವ ಸ್ಥಬ್ದಚಿತ್ರಗಳು ಜನರನ್ನು ಆಕರ್ಷಿಸಿತು. ಅಲ್ಲದೇ ಸ್ಥಬ್ದಚಿತ್ರಗಳ ಮುಂದೆ ಮಹಿಳೆಯರು ಪುರುಷರು, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆಲ್ಪಿ ತೆಗೆದುಕೊಳ್ಳಲು ಮುಂದಾದರು.

ಇನ್ನು ವಸ್ತು ಪ್ರದರ್ಶನ ಮಳಿಗೆಯಲ್ಲಿ ಸರಕಾರದ ಹತ್ತು ಹಲವು ಯೋಜನೆಗಳ ಮಾಹಿತಿಯುಳ್ಳ ಪ್ರದರ್ಶನ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ಸಾರ್ವಜನಿಕರು ಯೋಜನೆಗಳುಳ್ಳ ಮಾಹಿತಿಯನ್ನು ವೀಕ್ಷಿಸಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net