

ಬಾಗಲಕೋಟೆ: ಬಾದಾಮಿ ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ ಮಾಗುಂಟಪ್ಪ ಬೂದಿಹಾಳ ಅವರ ಅಧ್ಯಕ್ಷತೆಯಲ್ಲಿ ಬಾದಾಮಿ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಽಕಾರದ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಸಭೆಯಲ್ಲಿ ಜಿಲ್ಲಾ ಉದ್ಯೋಗ ಅಽಕಾರಿ ಹಿರೇಮಠ ಮಾತನಾಡಿ ೧೭೦೬ ಪದವೀಧರರು, ೫ ಡಿಪ್ಲೋಮಾ ವಿದ್ಯಾರ್ಥಿಗಳು ಒಟ್ಟು ೧೭೧೧ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗುತ್ತಿದೆ. ಪ್ರಸ್ತುತ ೪೦೧ ಅರ್ಜಿಗಳು ಆನ್‌ಲೈನ್‌ನಲ್ಲಿ ಇದ್ದು, ಈ ಪೈಕಿ ೨೮೨ ಅರ್ಜಿಗಳನ್ನು ಅನುಮೋದಿಸಲಾಗಿದೆ. ಇದರಲ್ಲಿ ೨ ರಿಜೆಕ್ಟ್ ಆಗಿರುತ್ತವೆ. ೧೧೭ ಅರ್ಜಿಗಳನ್ನು ಡಾಕುಮೆಂಟ್ ವೇರಿಫಿಕೇಶನ್‌ಗೆ ಬಾಕಿ ಉಳಿದಿರುವುದಾಗಿ ತಿಳಿಸಿದರು.
ಶಕ್ತಿ ಯೋಜನೆಯಡಿ ಬದಾಮಿ ತಾಲೂಕಿನಲ್ಲಿ ಜೂನ್ ೧೧, ೨೦೨೩ ರಿಂದ ಅಕ್ಟೋಬರ ೭, ೨೦೨೪ವರೆಗೆ ಒಟ್ಟು ಮಹಿಳೆಯರು ಪ್ರಯಾಣಿಸಿದ ಸಂಖ್ಯೆ ೧೦೫೩೭೬೫೨ ಹಾಗೂ ಹೆಣ್ಣು ಮಕ್ಕಳು ಪ್ರಯಾಣಿಸಿದ ಒಟ್ಟು ಸಂಖ್ಯೆ ೩೮೪,೧೮೫ ಒಟ್ಟಾರೆ ೧೦೯೨೧೮೩೭ ಪ್ರಯಾಣಿಕರು ಸದರಿ ಯೋಜನೆಯನ್ನು ಉಪಯೋಗಿಸಿಕೊಂಡಿರುತ್ತಾರೆ. ಇದಕ್ಕೆ ೩೨,೩೦,೧೭೧೧೬.೦೦ ರೂಗಳಷ್ಟು ವಿನಿಯೋಗಿಸಲಾಗಿರುತ್ತದೆ ಎಂದು ಸಭೆಗೆ ತಿಳಿಸಲಾಯಿತು.
ಗೃಹಜ್ಯೋತಿ ಯೋಜನೆಗೆ ಸಂಬಂಸಿದಂತೆ, ಒಟ್ಟು ೩೯೪೩೦ ಗ್ರಾಹಕರು ಅರ್ಜಿ ಸ್ವೀಕೃತಗೊಂಡಿದ್ದು, ಇದರಲ್ಲಿ ೩೭೬೩೮ ಗ್ರಾಹಕರು ಸೌಲಭ್ಯವನ್ನು ಪಡೆದಿರುತ್ತಾರೆ. ಬಾಕಿ ಉಳಿದ ಗ್ರಾಹಕರ ಸಂಖ್ಯೆ ೧೭೯೨ ಅರ್ಜಿಯನ್ನು ಪರಿಶೀಲನೆ ಮಾಡಿದ ನಂತರ ಗೃಹ ಜ್ಯೋತಿ ಯೋಜನೆ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಆಹಾರ ಶಿರಸ್ತೆದಾರರು ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಓದಿ ಹೇಳಿದರು ಬಾದಾಮಿ ತಾಲೂಕಿನಲ್ಲಿ ಅರ್ಹ ಪಡಿತರ ಚೀಟಿಗಳು ಒಟ್ಟು ೪೬೨೨ ಇದರಲ್ಲಿ ಅರ್ಹ ಪಡಿತರ ಚೀಟಿಗಳಿಗೆ ಡಿ ಬಿ ಟಿ ಮೂಲಕ ಒಟ್ಟು ೪೫,೯೬೨ ಪಡಿತರ ಚೀಟಿಗಳಿಗೆ ೨೮೩೧೦೨೭೦ ಹಣ ಪಾವತಿಸಲಾಗಿದೆ ಡಿಬಿಟಿ ಮಾಡುವಲ್ಲಿ ವಿಫಲವಾದ ಪಡಿತರ ಚೀಟಿಗಳ ಸಂಖ್ಯೆ ೬೦ ಇದ್ದು, ಬಾದಾಮಿ ತಾಲೂಕಿನ ಒಟ್ಟಾರೆ ಪ್ರತಿಶತ ೯೬.೩೫ ರಷ್ಟು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ವಿಶ್ವ ಅಭಿವೃದ್ಧಿ ಯೋಜನೆ ಅಽಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಓದಿ ಹೇಳಿದರು. ಗೃಹಲಕ್ಷಿ÷್ಮÃ ಯೋಜನೆಗೆ ಇಲ್ಲಿಯವರೆಗೆ ಸಲ್ಲಿಸಿದ ಅರ್ಜಿಗಳು ಸಂಖ್ಯೆ ೪೯,೪೫೫ ಅರ್ಜಿಗಳು ಸ್ವೀಕಾರವಾಗಿದ್ದು, ಇದರಲ್ಲಿ ಜೂನ್ ಅಂತ್ಯದವರೆಗೆ ಒಟ್ಟು ೪೮೩೩೭
ಫಲಾನುಭವಿಗಳ ಖಾತೆಗೆ ಹಣವನ್ನು ಪಾವತಿಸಲಾಗಿರುತ್ತದೆ ಅದರಂತೆ ಹಣ ಜಮಾ ಆಗದೇ ಬಾಕಿ ಉಳಿದಿರುವ ೧೦೧೮ ಫಲಾನುಭವಿಗಳ ತಾಂತ್ರಿಕ ದೋಷವಿದ್ದು ಸರಿಪಡಿಸಲಾಗುವುದು ಎಂದರು.
ಸಭೆಯಲ್ಲಿ ಬಾದಾಮಿ ತಾಲೂಕಾ ಪಂಚಾಯಿತಿತ ಕಾರ್ಯನಿರ್ವಾಹಕ ಅಽಕಾರಿ ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ, ಬಾದಾಮಿ ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಸದಸ್ಯರು ಉಪಸ್ಥಿತಿರಿದ್ದರು.