ಗೌಸಿಯಾ ಮಸೀದಿಯಲ್ಲಿ ಅವ್ಯವಹಾರ ಆರೋಪ

30 YLP 03
Published on

ಯಲ್ಲಾಪುರ: ಪಟ್ಟಣದ ಗೌಸಿಯಾ ಮಸೀದಿಯಲ್ಲಿ ಹಣಕಾಸಿನ ಅವ್ಯವಹಾರವಾಗಿದ್ದು, ಈ ಕುರಿತು ತನಿಖಾಧಿಕಾರಿಗಳ ಮೂಲಕ ಪಾರದರ್ಶಕ ತನಿಖೆ ನಡೆಸಬೇಕೆಂದು ತಾಮೀರ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಮಹಮ್ಮದ್ ಗೌಸ್ ಎ. ಶೇಖ್ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಅವರು, ಗೌಸಿಯಾ ಮಸೀದಿಯಲ್ಲಿ ಕಳೆದ 7 ವರ್ಷಗಳಿಂದ ಕೆಲವರು ಒತ್ತಾಯಪೂರ್ವಕವಾಗಿ ಸಮಿತಿ ರಚಿಸಿಕೊಂಡಿದ್ದು, ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಬೇಕಾದವರನ್ನು ಪದಾಧಿಕಾರಿ ಹುದ್ದೆಗೆ ನೇಮಿಸಿಕೊಂಡಿದ್ದಾರೆ. ವಕ್ಪ್ ಬೋರ್ಡ್​ನ ಗಮನಕ್ಕೆ ತರದೇ ಹಣಕಾಸಿನ ವ್ಯವಹಾರ ನಡೆಸಿದ್ದು, ಅದರ ಮಾಹಿತಿಯನ್ನು ಬೋರ್ಡ್​ಗೆ ನೀಡಿಲ್ಲ. ಮಸೀದಿಯ ಶಾದಿ ಮಹಲ್, ಬಾಡಿಗೆ ಮನೆ, ಪಾತ್ರೆಗಳ ಬಾಡಿಗೆ, ಧಾರ್ವಿುಕ ಕಾರ್ಯಕ್ರಮಗಳಿಂದ ಆದಾಯ ಬರುತ್ತಿದ್ದು, ಅದರ ಲೆಕ್ಕಪತ್ರಗಳನ್ನೂ ವಕ್ಪ್ ಬೋರ್ಡ್​ಗೆ ನೀಡಿಲ್ಲ ಎಂದು ದೂರಿದ್ದಾರೆ.

ಸದ್ಯ ಮಸೀದಿಯ ನೋಟಿಸ್ ಬೋರ್ಡ್​ಗೆ ಲೆಕ್ಕಪತ್ರ ಅಂಟಿಸಿದ್ದು, ಅದರಲ್ಲಿ ಅಗತ್ಯ ಖರ್ಚಿಗಿಂತ 3-4 ಪಟ್ಟು ಹೆಚ್ಚಿನ ಖರ್ಚು ತೋರಿಸಲಾಗಿದೆ. ಮಸೀದಿಯ ಹಣ ದುರುಪಯೋಗಪಡಿಸಿಕೊಂಡ ಗುಮಾನಿ ಇದ್ದು, ಈ ಅವ್ಯವಹಾರದಿಂದಾಗಿ ಮಸೀದಿಯ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಂದಿಲ್ಲ. ಬೇರೆಲ್ಲ ಮಸೀದಿಗಳಿಗೆ ಅನುದಾನ ಬಂದಿದ್ದರೂ ಗೌಸಿಯಾ ಮಸೀದಿ ಹಿಂದೆ ಬೀಳುವಂತಾಗಿದೆ. ಕಾರಣ ಈ ಅವ್ಯವಹಾರದ ಕುರಿತು ಸೂಕ್ತ ತನಿಖೆಯಾಗಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net