

ದಾಂಡೇಲಿ: ದನಗರ ಗೌಳಿ ಸಮುದಾಯದವರಿಂದ ಸಂಪ್ರದಾಯದಂತೆ ತುಳಿಸಿ ಮದುವೆಯ ನಂತರ ಆಚರಿಸಲಾಗುವ ವಿಶೇಷ ಶಿಲ್ಲಂಗಾನ ಹಬ್ಬವನ್ನು ಅಂಬಿಕಾನಗರದ ಸಮೀಪದ ಜಮಗಾ ಗೌಳಿವಾಡಾದಲ್ಲಿ ಶುಕ್ರವಾರ ಆಚರಿಸಲಾಯಿತು.ಜಿಲ್ಲೆ ಮತ್ತು ಬೆಳಗಾವಿಯ 7 ತಾಲೂಕಿನ 28 ಗೌಳಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಮಗಾದ ಗೌಳಿ ಮುಖಂಡ ವಿಠ್ಠಲ ಅಕ್ಕು ತಾಟೆ ನೇತೃತ್ವದಲ್ಲಿ ಮಹಿಳೆಯರು, ಪುರುಷರು ಭಕ್ತಿ- ಶ್ರದ್ಧೆಯಿಂದ ಶಿಲ್ಲಂಗಾನ ಹಬ್ಬ ಆಚರಿಸಿದರು.