

ಶ್ರೀರಂಗಪಟ್ಟಣ: ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮ ಸಮೀಪದ ಗೌತಮ ಕ್ಷೇತ್ರದಲ್ಲಿನ ಕಾವೇರಿ ನದಿಯ ಭೂ ಪ್ರದೇಶದಲ್ಲಿ ಬೆಳೆದಿದ್ದ ಐದಾರು ಸಣ್ಣ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನದಿಯ ಮಧ್ಯಭಾಗದಲ್ಲಿ ಬೆಳೆದಿರುವ ಮರಗಳನ್ನು ಕಳೆದ ಹಲವು ದಿನಗಳಿಂದ ಮಠದ ಹೆಸರು ಹೇಳಿ ಅಪರಿಚಿತ ವ್ಯಕ್ತಿಗಳು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕತ್ತರಿಸಿ ಜೀಪುಗಳಲ್ಲಿ ಬೇರೆಡೆಗೆ ಸಾಗಿಸಿದ್ದಾರೆ. ಅರಣ್ಯ ಇಲಾಖೆಗೆ ಫೋಟೋಗಳ ಸಮೇತ ವಿಷಯದ ಕುರಿತು ಮಾಹಿತಿ ನೀಡಿ ದೂರು ನೀಡಿದ್ದು, ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ.