ಗೌಡಹಳ್ಳಿಯಲ್ಲಿ ಕಟ್ಟೆ ಒತ್ತುವರಿ ತೆರವು

12 yelandur 02
Published on

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಕಟ್ಟೆಯನ್ನು ಕಂದಾಯ ಇಲಾಖೆ ಅಧಿಕಾರಿಗಳ ತಂಡ ಮಂಗಳವಾರ ತೆರವುಗೊಳಿಸಿತು.


ಅಗರ ಹೋಬಳಿಗೆ ಸೇರಿದ ಗೌಡಹಳ್ಳಿ ಗ್ರಾಮದ ಎಲ್ಲೆಗೆ ಹೊಂದಿಕೊಂಡಂತಿರುವ ಸ.ನಂ. 15ರಲ್ಲಿ 36 ಗುಂಟೆ ಸರ್ಕಾರಿ ಕಟ್ಟೆ ಇತ್ತು. ಹಲವು ವರ್ಷಗಳಿಂದ ಅಕ್ಕಪಕ್ಕದ ರೈತರು ಇದನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು. ಈ ಸಂಬಂಧ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸ್ಥಳೀಯರು ದೂರು ನೀಡಿದ್ದರು. ಕಂದಾಯ, ಭೂ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಟ್ಟೆಯ ಸರ್ವೇ ಮಾಡಲಾಯಿತು.


ಇಲ್ಲಿ ಕಟ್ಟೆಯನ್ನು ಸರ್ವೇ ಮಾಡಿ ಸರ್ಕಾರಿ ಜಮೀನಿನಲ್ಲಿ ಒಕ್ಕಣೆ ಕಣ ನಿರ್ಮಿಸಿ, ತೆಂಗನ್ನು ಬೆಳೆಯಲಾಗಿದೆ. ಇದರೊಂದಿಗೆ 15 ಗುಂಟೆ ಜಮೀನನ್ನು ಒತ್ತುವರಿ ಮಾಡಲಾಗಿದ್ದು ಇಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ಇಲ್ಲಿನ ಕೆಲ ರೈತರು ಮಾಹಿತಿ ನೀಡಿದರು. ಈ ಸಂಬಂಧ ಕಟ್ಟೆಯನ್ನು ಸರ್ವೇ ಮಾಡಲಾಗಿದ್ದು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆರ್‌ಐ ರಾಜಶೇಖರ್, ವಿಎ ನಂಜುಂಡಸ್ವಾಮಿ ಸರ್ವೇ ಇಲಾಖೆಯ ಲೋಕೇಶ್ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net