ಗೋವಾಕ್ಕೆ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಗೋಮಾಂದ ವಶ

IMG-20221002-WA0086.jpg
Published on

ಜೊಯಿಡಾ:ಗೋವಾಕ್ಕೆ ಭಾರಿ ಪ್ರಮಾಣದ ಗೋಮಾಂಸ ಸಾಗಿಸುತ್ತಿದ್ದ ಧಾರವಾಡ ಅಳ್ನಾವರ ಮೂಲದ‌ ಐವರನ್ನಯ ಭಾನುವಾರ ಜೊಯಿಡಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಳ್ನಾವರ ಮೂಲದ ಸಾದಿಕ್ ಅತ್ತಾರ, ಇಲಿಯಾಸ್ ತಾಳಿಕೋಟೆ, ದಾವಲ್ ಮಲಿಕ್ ಮನ್ನೂರಕರ್, ಖಾನಾಪುರದ ರಾಜಾಸಾಬ್ ಹರಗಿ, ಶಾಹೀದ್ ಶಿಂದೋಡಿ ಎಂಬುವವರನ್ನು ತಾಲೂಕಿನ ಅನಮೋಡ ಚೆಕ್‌ಪೊಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.‌

ಅವರಿಂದ 3 ಲಕ್ಷ ರೂ. ಮೌಲ್ಯದ 22 ಕ್ವಿಂಟಾಲ್‌ ಗೋಮಾಂಸ ಮತ್ತು ಎರಡು ಪಿಕ್‌ಅಪ್ ಹಾಗೂ ಒಂದು 407 ವಾಹನ ಜಪ್ತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net