ಗೋಕರ್ಣದ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಆತ್ಮಲಿಂಗಕ್ಕೆ ಚಲನಚಿತ್ರ ನಟ ಪುನೀತ ರಾಜಕುಮಾರ ಬುಧವಾರ ವಿಶೇಷ ಅಭಿಷೇಕ ಕೈಗೊಂಡರು. ವೇ. ಪ್ರಶಾಂತ ಹಿರೇಗಂಗೆ ಮತ್ತು ಉಪಾಧಿವಂತ ವೈದಿಕರು ಪೂಜೆ ನಿರ್ವಹಿಸಿದರು. ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಅವರು ಮಂದಿರದ ವತಿಯಿಂದ ಸನ್ಮಾನಿಸಿದರು. ಕ್ಷೇತ್ರ ಪುರೋಹಿತ ರಾಜಗೋಪಾಲ ಅಡಿ ಇತರರು ಇದ್ದರು.