ಗೋಕರ್ಣದಲ್ಲಿ ದಧಿ-ಶಿಕ್ಯೋತ್ಸವ

13gkn2-a-
Published on

ಗೋಕರ್ಣ: ಮಹಾಬಲೇಶ್ವರ ಮಂದಿರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಧಿ-ಶಿಕ್ಯೋತ್ಸವ (ಮೊಸರು ಗಡಿಗೆ ಉತ್ಸವ) ಸರಳವಾಗಿ ನಡೆಯಿತು. ಮಂದಿರದಿಂದ ಹೊರಟ ಶ್ರೀದೇವರ ಪಲ್ಲಕ್ಕಿ ಸವಾರಿ ಕೋಟಿ ತೀರ್ಥದ ಗೋಪಾಲಕೃಷ್ಣ ಮಂದಿರಕ್ಕೆ ಭೇಟಿಯಿತ್ತು ಮಹಾ ಮಂಗಳಾರತಿಯಲ್ಲಿ ಪಾಲ್ಗೊಂಡಿತು. ವೇ. ಸಾಂಬ ಭಟ್ಟ ಷಡಕ್ಷರಿ ನೇತೃತ್ವದಲ್ಲಿ ನಡೆದ ಉತ್ಸವದ ವೇಳೆ ನಿಗದಿತ ಪಾರಂಪರಿಕ ಸ್ಥಳಗಳಲ್ಲಿ ಮೊಸರು ಗಡಿಗೆಗಳನ್ನು ಒಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net