ಗೊಡ್ಡು ಬೆದರಿಕೆಗೆ ಬಗ್ಗುವದಿಲ್ಲ

bkt-10-1 a
ಬಾದಾಮಿ ತಾಲೂಕಿನ ವಿವಿಧೆಡೆ ಮನೆ ಹಾನಿ, ಪ್ರವಾಹ ಪೀಡಿತ ಪ್ರದೇಶಕ್ಕೆ ಕ್ಷೇತ್ರದ ಶಾಸಕ, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು.
Published on

ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹ ,ಮಳೆ ಹಾನಿಯಿಂದ ಆದ ಬಾದಾಮಿ ಮತಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕ್ಷೇತ್ರದ ಶಾಸಕ, ವಿ.ಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಸಂತ್ರಸ್ತರಿಗೆ ಸರ್ಕಾರದಿಂದ ನೀಡುವ ಪರಿಹಾರ ಸಮರ್ಪಕವಾಗಿ ತಲುಪಿಸುವುದಾಗಿ ಅಭಯ ನೀಡಿದರು. ಈ ಸಂದರ್ಭದಲ್ಲಿ ಮುಂದಿನ ಸಾರಿ ನಮ್ಮ ಸರ್ಕಾರ ಬರುತ್ತದೆ. ಈ ಗ್ರಾಮಗಳ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದರು. ಹಾನಿ ವೀಕ್ಷಣೆ ವೇಳೆ ಸಿದ್ದರಾಮಯ್ಯಗೆ ಮಳೆ ಅಡ್ಡಿ ಪಡಿಸಿತು.
ನಿಮ್ಮಪ್ಪನ ಮನೆ ಗಂಟು ಹೋಗಲ್ಲ:
ಗೋವನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಹಳೇ ಸೇತುವೆ ಹಾಗೂ ಸುತ್ತಲಿನ ಕಬ್ಬು, ಪೇರಲ ಬೆಳೆ ಹಾನಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮೂರು ವರ್ಷದಿಂದ ಸತತ ಬೆಳೆಹಾನಿ ಆದರು ಪರಿಹಾರ ಕೊಟ್ಟಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ಮಳೆಯಿಂದ ಹಾನಿಯಾಗಿರೋ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿದ್ದರಾಮಯ್ಯ. ಎನ್ ಡಿ ಆರ್ ಎಫ್ ನಾರ್ಮಸ್ ಪ್ರಕಾರ ಪರಿಹಾರ ನೀಡುತ್ತಿದ್ದೇವೆ ಎಂದು ಬಾದಾಮಿ ತಹಸೀಲ್ದಾರ ಜೆ.ಬಿ.ಮಜ್ಜಗೆ ಹೇಳಿದರು. ಈ ವೇಳೆ ಸಿದ್ದರಾಮಯ್ಯ ಲಿಬರಲ್ ಆಗಿ ಪರಿಹಾರ ಕೊಡಿ. ನಿಮ್ಮಪ್ಪನ ಮನೆ ಗಂಟೇನು ಹೋಗಲ್ಲ ಎಂದು ಅಧಿಕಾರಿ ಜಿ.ಬಿ ಮಜ್ಜಗಿಗೆ ಸೂಚನೆ ನೀಡಿದರು.ಈ ವೇಳೆ ವ್ಯಕ್ತಿವೋರ್ವ ಡೊಳ್ಳು ಬಡಿಯುವ ಕೆಲಸ ಮಾಡ್ತಿದ್ದೇನೆ. ಸರ್ಕಾದಿಂದ ತಮಗೆ ಸಹಾಯ ಮಾಡಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, ಅವರು(ಸರ್ಕಾರ) ನಮ್ಮ ಮಾತು ಕೇಳಲ್ಲ. ಅವರಿಗೆ ಬೇಕಾದವರಿಗೆ ಮಾಡಿ ಕೊಡ್ತಾರೆ. ಆದ್ರೂ ಪತ್ರ ಬರೆಯುತ್ತೇನೆ ಎಂದು ಅಭಯ ನೀಡಿದರು.

ಮತ್ತೆ ಸಿಎಂ ಆಗುವ ಕನಸು ಕಂಡ ಸಿದ್ದು: ಕಿತ್ತಲಿ ಗ್ರಾಮದಲ್ಲಿ ಪ್ರವಾಹ ವೀಕ್ಷಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಗ್ರಾಮಸ್ಥರು ಮನೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಈ ಸರ್ಕಾರ ಏನು ಮಾಡುವದಿಲ್ಲ. ಇನ್ನು ಆರೇಳು ತಿಂಗಳಾದ್ರೆ ನಾವೇ ಮತ್ತೇ ಅಧಿಕಾರಕ್ಕೆ ಬರ್ತಿವೆ. ಆಗ ನಿಮ್ಮ ಕೆಲಸ ನಾವೇ ಮಾಡ್ತೀವಿ ಅಂತ ಹೇಳಿದರು. ಈ ವೇಳೆ ಅಭಿಮಾನಿಯೊಬ್ಬ ಸಿಎಂ ಆದ್ರೆ ಪೂರ್ಣ ಗ್ರಾಮ ಶಿಫ್ಟ್ ಮಾಡ್ತಾರೆ ಎಂದರು. ಹೌದು, ಪೂರ್ಣ ಗ್ರಾಮ ಶಿಫ್ಟ ಮಾಡಿ ಕೊಡ್ತೀನಿ ಎನ್ನುತ್ತಲೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟರು.

ಬಿಜೆಪಿ ವಿರುದ್ಧ ವಾಗ್ದಾಳಿ..
ಬಾದಾಮಿ ತಾಲೂಕಿನ ಕಳಸ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅರ್ಕಾವತಿ ರೀಡು ಪ್ರಕರಣ ತೆಗೆದರೆ ಕಳ್ಳ-ಸುಳ್ಳ ಯಾರು ಗೊತ್ತಾಗುತ್ತೆ ಅಂತ ಸಿ.ಟಿ.ರವಿ ಹೇಳಿದಿದ್ದಾರೆ. ಇವರ(ಬಿಜೆಪಿ) ಗೊಡ್ಡ ಬೆದರಿಕೆಗಳಿಗೆ ಹೆದರುವದಿಲ್ಲ. ಇಷ್ಟು ದಿನ ಯಾಕೆ ಸುಮ್ಮನಿದ್ದರು..? ಗೊಡ್ಡ ಬೆದರಿಕೆಗಳಿಗೆ ಹೆದರೊರಲ್ಲ ನಾವು. ಮೂರು ವರ್ಷದಿಂದ ಇವರದ್ದೆ ಸರ್ಕಾರ ಇತ್ತಲ್ಲ. ಇಷ್ಟು ದಿನ ಯಾಕೆ ಸುಮ್ಮನಿದ್ರು. ಅವರಿಗೆ ನನ್ನ ಕಂಡ್ರೆ ಭಯ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸುವ ವೇಳೆ ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ಮಾಡಿಸಿ ಎಂದು ಜನರು ಮನವಿ ಸಲ್ಲಿಸಿದರು. ಈ ವೇಳೆ ಸಿದ್ದರಾಮಯ್ಯ, ಅವರು ಬಿಜೆಪಿ ಮಾಡಬೇಕಲ್ಲಪ್ಪ ಮಾರಾಯ. ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದರು. ಈ ವೇಳೆ ಗ್ರಾಮಸ್ಥರು ಸರ್ ಸಚಿವ ಸುಧಾಕರ ನಿಮ್ಮ ಮಾತು ಕೇಳ್ತಾರೆ. ಈ ಕೆಲಸ ಮಾಡಿಸಿ ಎಂದರು. ಯಾರ ಹೇಳ್ತಾರೆ, ನನ್ನ ಮಾತು ಕೇಳ್ತಾರೆ ಅಂತ. ಕೇಳ್ತಾನೆ ಅಂತ ಸುಳ್ಳು ಹೇಳ್ತಾರೆ. ನಾನೇ ಅವನ್ನ ಎಂಎಲ್ಎ ಮಾಡಿದ್ದು, ಅಲ್ಲಿ ಮಂತ್ರಿ ಆಗೋಕೆ ಹೋಗಿದ್ದಾನೆ. ನನ ಮಗ ಸುಳ್ಳು ಹೇಳ್ತಾನೋ. ಅವನು ಮಹಾಕಳ್ಳ ಅಂತ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net