ಗೆಳೆಯರ ಬಳಗದಿಂದ ಸಂಗೀತ ಸಂಕ್ರಾ0ತಿ ಸಂಭ್ರಮ

bkt-15-3
ಬಾಗಲಕೋಟೆ ತಾಲೂಕಿನ ನೀರಲಕೇರಿ ಗ್ರಾಮದ ಅದೃಷ್ಟವನ ತೋಟದಲ್ಲಿ ಬಾಗಲಕೋಟೆ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸಂಗೀತ ಸಂಕ್ರಾ0ತಿ ಕಾರ್ಯಕ್ರಮದಲ್ಲಿ ಗಾಯಕಿ ಅದಿತಿ ಖಂಡೇಗಳ್ ಅವರು ಗಾಯನ ಪ್ರಸ್ತುತ ಪಡಿಸಿದರು
Published on

ಬಾಗಲಕೋಟೆ: ತಾಲೂಕಿನ ನೀರಲಕೇರಿಯ ಡಾ. ಎಚ್.ಎಫ್. ಯೋಗಪ್ಪನವರ ಅದೃಷ್ಟವನ ತೋಟದಲ್ಲಿ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಸೇವಾ ಸಂಸ್ಥೆ ಬಾಗಲಕೋಟೆ ಗೆಳೆಯರ ಬಳಗ ಸಂಗೀತ ಸಂಕ್ರಾ0ತಿ ಕಾರ್ಯಕ್ರಮ ಮಂಗಳವಾರ ಜರುಗಿತು.

ಗಾಯಕಿ ಅದಿತಿ ಖಂಡೇಗಳ್ ೨ ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಭಕ್ತಿ ಗೀತೆಗಳಾದ ಪ್ರಣತಿ ಇದೆ ಬತ್ತಿ ಇದೆ, ಗುರುವಿಗೆ ತನುವನ್ನು, ಕಮಲೆ ಕಮಲಾಲಯ, ನಿನ್ಯಾಕೋ ನಿನ್ನ ಹಂಗ್ಯಾಕೋ, ಕ್ಲಾಸಿಕಲ್ ನಲ್ಲಿ ನಾಟ್ಯ ಸಂಗೀತಾ, ಹಿಂದಿ ಗಜರ ಜೈ ಜೈ ರಾಮ, ಚಲನಚಿತ್ರ ಗೀತೆಗಳಾದ ಬಾನಲ್ಲೂ ನೀನೇ, ಸಂಕ್ರಾ0ತಿ ರುತೋ ರುತೋ, ಸತ್ಯಂ ಶಿವಂ ಸುಂದರA, ಪಾಯೋಜಿ ಮೈನೆ ರಾಮ ರತನ ಧನ ಪಾಯೋ ಮುಂತಾದ ಹಾಡುಗಳು ನೆರೆದವರನ್ನು ಮಂತ್ರ ಮುಗ್ಧರನ್ನಾಗಿಸಿತು. ಸಂಕ್ರಾAತಿ ಹಬ್ಬಕ್ಕೆ ಸಂಗೀತದ ಸವಿಭೋಜನ ಬಡಿಸಿದರು.

ನಂತರ ಗೆಳೆಯರ ಬಳಗದ ಸದಸ್ಯರು, ಪರಿವಾರ ಸರ್ವ ಸದಸ್ಯರು ಸೇಂಗಾ-ಎಳ್ಳು ಹೋಳಿಗೆ, ಹುಗ್ಗಿ, ಬೆಣ್ಣೆ, ತುಪ್ಪ, ಕಡಕ ಜೋಳದ ಹಾಗೂ ಸಜ್ಜಿ ರೊಟ್ಟಿ, ಕೆನೆ ಮೊಸರು, ಸೇಂಗಾ-ಅಗಸಿ-ಗುರೆಳ್ಳು ಚಟ್ನಿಪುಡಿ, ತುಂಬ ಬದ್ನೆಕಾಯಿ ಪಲ್ಲೆ, ಕಾಳು ಪಲ್ಲೆ, ಮಿರ್ಚಿ ಬಜಿ, ಪಚಡಿ, ಸಾದಾ ಅನ್ನ-ಫಲಾವ-ಮೊಸರನ್ನ ವಿವಿಧ ಖಾದ್ಯಗಳು ಸ್ವಯಂ ಪರಿವಾರದ ಸದಸ್ಯರು ಮನೆಯಿಂದ ಮಾಡಿ ತಂದಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಬಾಗಲಕೋಟ ಅರ್ಬನ್ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಬಳಗದ ಸದಸ್ಯ ಡಾ. ಪ್ರಹ್ಲಾದ ಹುಯಿಲಗೋಳ, ಬಸವೇಶ್ವರ ಸಹಕಾರಿ ಬ್ಯಾಂಕಿಗೆ ನಿರ್ದೇಶಕಿಯಾಗಿ ಆಯ್ಕೆಗೊಂಡ ಶೈಲಜಾ ಮ. ಗುಡಗುಂಟಿ, ಗಾಯಕಿ ಅದಿತಿ ಖಂಡೇಗಲ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಮಹಾಬಳೇಶ್ವರ ಗುಡಗುಂಟಿ, ಉಪಾಧ್ಯಕ್ಷ ಎಸ್ ಎಸ್ ಗದ್ದಿ, ಕೋಶಾದ್ಯಕ್ಷ ಜಿ ಎಸ್ ಬುರ್ಲಿ, ಬಸವರಾಜ ಭಗವತಿ, ಡಾ.ಬಿ.ಎಚ್.ಕೆರೂಡಿ, ಡಾ..ಆರ್.ಟಿ.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಡಾ.ವಿ.ಆರ್ ಸೋರಗಾಂವಿ, ಡಾ.ಪ್ರಭುಸ್ವಾಮಿ ಮಠ, ಡಾ.ಎಚ್.ಎಫ್ ಯೋಗಪ್ಪನವರ, ಡಾ.ಬಿ ಎಸ್ ಮರೆಗುದ್ದಿ, ಜಿ.ಎನ್.ಪಾಟೀಲ, ಎಂ.ಎನ್ ಪುರಾಣಿಕಮಠ, ಆರ್.ಎಸ್.ದಂಡಣ್ಣವರ, ಎಂ.ಎಸ್.ಹ0ಡಿ, ಎ.ಎಸ್.ಪಾವಟೆ ಇತರರು ಇದ್ದರು. ವಿನೋದ ಯಡಹಳ್ಳಿ ನಿರೂಪಿಸಿದರು. ಜಯಪ್ರಕಾಶ ಬೆಂಡಿಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net