ಗುಲ್ಬರ್ಗ ವಿವಿ ಘಟಿಕೋತ್ಸವ 12ರಂದು

GUG
Published on

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ೪೨ನೇ ಘಟಿಕೋತ್ಸವ ಆ.೧೨ರಂದು ಬೆಳಗ್ಗೆ ೧೧ಕ್ಕೆ ನಡೆಯಲಿದ್ದು, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ಕುಲಪತಿ ಪ್ರೊ.ದಯಾನಂದ ಅಗಸರ್ ಹೇಳಿದರು.
ವಿವಿ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವರೂ ಆದ ವಿವಿ ಸಮ ಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಉಪಸ್ಥಿತಿಯಲ್ಲಿ ಸಿಎಸ್‌ಐಆರ್ ರಾಷ್ಟಿçÃಯ ಸಾಗರಶಾಸ್ತç ಸಂಸ್ಥೆ ನಿರ್ದೇಶಕ ಪ್ರೊ.ಸುನಿಲಕುಮಾರ್ ಸಿಂಗ್ ಘಟಿಕೋತ್ಸವ ಭಾಷಣ ಮಾಡುವರು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಉದ್ಯಮಿ ಲಿಂಗರಾಜ ಬಸವರಾಜಪ್ಪ ಅಪ್ಪ, ಹಿರಿಯ ನ್ಯಾಯವಾದಿ ಅರ್ಚನಾ ತಿವಾರಿ, ಹೋರಾಟಗಾರ ಲಕ್ಷö್ಮಣ ದಸ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಗೌಡಾಕ್ಕಾಗಿ ಬಂದಿದ್ದ ೧೨ ಅರ್ಜಿಗಳನ್ನು ತಜ್ಞರ ಸಮಿತಿಗೆ ರವಾನಿಸಲಾಗಿತ್ತು. ಸಮಿತಿ ರಾಜ್ಯಪಾಲರಿಗೆ ಕೆಲ ಹೆಸರು ಶಿಫಾರಸು ಮಾಡಿತ್ತು. ಅವರು ಈ ಮೂವರ ಹೆಸರಿಗೆ ಸಮ್ಮತಿ ಸೂಚಿಸಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ ೧೩,೪೩೮ ವಿದ್ಯಾರ್ಥಿನಿಯರು ಸೇರಿ ೨೯,೩೦೭ ವಿದ್ಯಾರ್ಥಿಗಳು ವಿವಿಧ ಪದವಿ ಪಡೆಯಲಿದ್ದಾರೆ. ಪದವಿ ೨೫,೮೯೮ ವಿದ್ಯಾರ್ಥಿಗಳಲ್ಲಿ ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ೭೬೯೯ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯ ೬೦೮ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ೧೬ ಉಪ ಸಮಿತಿಗಳನ್ನು ರಚಿಸಿ ಸಿದ್ಧತೆಯ ಉಸ್ತುವಾರಿ ವಹಿಸಿಕೊಡಲಾಗಿದೆ ಎಂದು ಪ್ರೊ.ಅಗಸರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net