ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

BVVS NEWS
Published on

ಬಾಗಲಕೋಟೆ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಒಬ್ಬ ಹುಡುಗ ಕಲ್ಲನ್ನು ಎಸೆದರೆ ಅದೂ ೧೦೦ಮೀಟರ್ ದೂರ ಹೋಗುತ್ತದೆ, ಅದೇ ಒಬ್ಬ ಸೈನಿಕ ಗುಂಡನ್ನು ಎಸೆದರೆ ೧೦೦೦ ಮೀಟರ್ ದೂರ ಹೋಗುತ್ತದೆ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜೇಶ್ವರಿ ತೆಗ್ಗಿ ಹೇಳಿದರು.

ನಗರದ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅದೇ ಒಬ್ಬ ಶಿಕ್ಷಕ ಹಸಿವಿನ ತುತ್ತನ್ನು ಎಸೆದಾಗ ಅದೂ ಸ್ವರ್ಗದ ಬಾಗಿಲನ್ನೂ ತೆರೆಯುತ್ತದೆ. ಎಂಬಂತೆ ಜೀವನದಲ್ಲಿ ಎಲ್ಲ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು, ಮಕ್ಕಳೂ ಕೂಡ ಗುರುವನ್ನೂ ಗೌರವಿಸಿದಾಗ ಮಾತ್ರ ಒಬ್ಬ ಉತ್ತಮ ನಾಯಕನ ನಿರ್ಮಾಣ ಆಗುತ್ತದೆ ಎಂದರು.

ಉಪನ್ಯಾಸಕ ರಾಘವೆಂದ್ರ ಕುಲಕರ್ಣಿ ಮಾತನಾಡಿದರು. ಚೈತ್ರ ರಾಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಾವಿತ್ರಿ ಶಹಾಪುರ ಬಹುಮಾನ ವಿತರಿಸಿದರು. ಅಕ್ಷತಾ ಅಂಗಡಿ ಹಾಗೂ ಸುಶ್ಮಿತಾ ಗಂಗಲ ಸ್ವಾಗತಿಸಿದರು.ಅಭಿಷೇಕ ಬಾರಕೆರ ನಿರೂಪಿಸಿದರು. ವಿಜಯಕುಮಾರ ಕೋಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net