ಗುರುನಾಥ ಪುತ್ರಿ ಜ್ಯೋತಿ ಬಿಜೆಪಿ ತೆಕ್ಕೆಗೆ

Jadhav
Published on

ಚಿತ್ತಾಪುರ: ಕಾಂಗ್ರೆಸಿಗರ ಅನ್ಯಾಯ ತಾಳಿಕೊಂಡು ಚಿತ್ತಾಪುರದಲ್ಲಿ ನಿರಂತರ ಬಿಜೆಪಿ ಬೆಂಬಲಿಸಿದ್ದೀರಿ. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಿ ಮೋದಿ ಮೂರನೇ ಬಾರಿ ಪ್ರಧಾನಿಯಾಗಲು ಅವಕಾಶ ನೀಡಬೇಕು. ಎರಡನೇ ಬಾರಿ ಜಾಧವ್ ಅವರನ್ನು ಸಂಸತ್ತಿಗೆ ಕಳುಹಿಸಿ ಸಚಿವರನ್ನಾಗಿ ನಾವೆಲ್ಲ ಕಾಣಬೇಕು ಎಂದು ಬಿಜೆಪಿ ಕಲಬುರಗಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲï ಹೇಳಿದರು. ಕಾರ್ಮಿಕ ಮುಖಂಡ, ಮಾಜಿ ಸಚಿವ ದಿ. ಸಿ.ಗುರುನಾಥ ಪುತ್ರಿ ಉದ್ಯಮಿ ಜ್ಯೋತಿ ಅವರು ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಂಡರು. ಸಂಸದ ಡಾ.ಉಮೇಶ ಜಾಧವ್, ಚಿತ್ತಾಪುರ ಉಸ್ತುವಾರಿ ಶರಣಪ್ಪ ತಳವಾರ ಸೇರಿ ಅನೇಕ ನಾಯಕರು ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net