ಗುರು ಹಿರಿಯರ ಸ್ಮರಣೆಯಿಂದ ಶಾಂತಿ, ನೆಮ್ಮದಿ

6ark5
ಅರಕಲಗೂಡು ತಾಲೂಕಿನ ಕೆಸವತ್ತೂರು ಮಠದಲ್ಲಿ ಆಯೋಜಿಸಿದ್ದ 4ನೇ ತಿಂಗಳ ಹುಣ್ಣಿಮೆ ಮತ್ತು ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಧನಗೂರು ವೀರ ಸಿಂಹಾಸನ ಮಠದ ಶ್ರೀ ಮುಮ್ಮಡಿ ಷಡಾಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಜಿ ಅವರನ್ನು ಗೌರವಿಸಲಾಯಿತು. ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕುಮಾರಸ್ವಾಮಿ ಇತರರಿದ್ದರು.
Published on

ಅರಕಲಗೂಡು: ಗುರು, ಹಿರಿಯರನ್ನು ಸ್ಮರಿಸುವುದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಿ ಬದುಕಿನಲ್ಲಿ ಸಂತೋಷ ಕಂಡುಕೊಳ್ಳಬಹುದು ಎಂದು ಧನಗೂರು ವೀರ ಸಿಂಹಾಸನ ಮಠದ ಶ್ರೀ ಮುಮ್ಮಡಿ ಷಡಾಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಕೆಸವತ್ತೂರು ಮಠದಲ್ಲಿ ಅಕ್ಕನ ಬಳಗ ಮಹಿಳಾ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 4ನೇ ತಿಂಗಳ ಹುಣ್ಣಿಮೆ ಮತ್ತು ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಅಂಗ ಸತಿ, ಲಿಂಗ ಪತಿ ಎಂಬ ಧ್ಯೇಯ ವಾಕ್ಯ ನೀಡಿ ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯೆಂದು ಸ್ವೀಕರಿಸಿ, ಶರಣ ಸಂಸ್ಕೃತಿಯನ್ನು ಎತ್ತಿ ಹಿಡಿದ ಅಗ್ರಗಣ್ಯರಲ್ಲಿ ಶರಣೆ ಅಕ್ಕಮಹಾದೇವಿ ಒಬ್ಬರಾಗಿದ್ದಾರೆ ಎಂದರು.

ಕೆಸವತ್ತೂರು ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಹೆಣ್ಣು ಸಮಾಜದ ಕಣ್ಣು ಎನ್ನುವ ನಾಣ್ನುಡಿಯಂತೆ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ಹಾಗೂ ನಮ್ಮ ಶಿವಶರಣರ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ಜತೆಗೆ ಸಮಾಜದಲ್ಲಿ ಹಾಗೂ ಮಕ್ಕಳಲ್ಲಿ ಶಿವಶರಣರ ವಚನಗಳನ್ನು ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಲು, ಶ್ರೀಮಠದಲ್ಲಿ ಅಕ್ಕನ ಬಳಗ ಮಹಿಳಾ ವೇದಿಕೆ ಸ್ಥಾಪಿಸಿದ್ದೇವೆ. ಅಲ್ಲದೇ ಹಾಸನ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಅವರು ಅಕ್ಕನ ಬಳಗ ಮಹಿಳಾ ವೇದಿಕೆ ವತಿಯಿಂದ ಪ್ರತಿ ವರ್ಷವೂ ಶಾಲಾ-ಕಾಲೇಜುಗಳಿಗೆ ಉಚಿತವಾಗಿ ವಚನ ಪುಸ್ತಕಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿಗಳಾದ ಸೀಬಹಳ್ಳಿ ಸೋಮಶೇಖರ್, ವಡ್ವಾನಹೊಸಹಳ್ಳಿ ದೇವರಾಜು, ದಿವಾಕರ್, ಪರಿಷತ್ತಿನ ಕೆ.ಎಂ. ಮಹೇಶ್, ಸೋಮಶೇಖರ್, ಅಕ್ಕನ ಬಳಗ ಮಹಿಳಾ ವೇದಿಕೆ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net