ಗುರು ಪೂರ್ಣಿಮೆ ಶ್ರೇಷ್ಠ ಹಬ್ಬ

bkt-13-4
ಬಾಗಲಕೋಟೆ ನಗರದ ವಿದ್ಯಾಗಿರಿ ೧೭ನೇ ಕ್ರಾಸ್‌ನಲ್ಲಿನ ಹನುಮಾನ ಮಂದಿರ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮ.
Published on

ಬಾಗಲಕೋಟೆ: ವ್ಯಕ್ತಿಯು ಸರ್ವೋತ್ತಮುಖ ಬೆಳವಣಿಗೆಯಾಗಲು ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ನಾವು ಯಾವಾಗಲೂ ಗುರುವಿಗೆ ವಿಧೇಯರಾಗಿರಬೇಕು. ಗುರುವಿನ ಮಾರ್ಗದರ್ಶನದಲ್ಲಿ ಸಾಗಿದರೆ ಬಾಳು ಸಮೃದ್ಧವಾಗುತ್ತದೆ ಎಂದು ಜಿ¯್ಲÁ ಪತಂಜಲಿ ಮುಖ್ಯ ಪ್ರಭಾರಿ ಎಚ್.ಎನ್.ಇನಾಮದಾರ ಹೇಳಿದರು.

ನಗರದ ವಿದ್ಯಾಗಿರಿ ೧೭ನೇ ಕ್ರಾಸ್‌ನಲ್ಲಿನ ಹನುಮಾನ ಮಂದಿರ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೇಷ್ಠ ಗುರುಗಳ ಸಂಘದಿAದಲೇ ನರೇಂದ್ರರು ವಿಶ್ವವಿಖ್ಯಾತ ವಿವೇಕಾನಂದರಾದರು. ಸಳ ಎಂಬ ವ್ಯಕ್ತಿ ಹೊಯ್ಸಳ ಎಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ. ಬಿಲ್ವಿದ್ಯೆಯಲ್ಲಿ ಪಾರಂಗತನಾದ ಏಕಲವ್ಯ ಗುರುಕಾಣಿಕೆಯಾಗಿ ತನ್ನ ಹೆಬ್ಬೆಟ್ಟು ನೀಡಿರುವುದು ನಮಗೆಲ್ಲರಿಗೂ ಕೂಡ ಆದರ್ಶವಾಗಿದೆ. ನಾವು ಕೂಡ ಶ್ರೇಷ್ಠ ಸಮಾಜ ನಿರ್ಮಿಸಲು ಗುರುಗಳ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.

ನಗರಸಭೆಯ ಅಧ್ಯಕ್ಷ ಸವಿತಾ ಲೆಂಕಣ್ಣವರ ಮಾತನಾಡಿ, ಒಂದು ದೇಶದ ನಿಜವಾದ ಸಂಪತ್ತು ಎಂದರೆ ಅದು ಆರೋಗ್ಯ. ಪತಂಜಲಿ ಸಮಿತಿ ನಿರಂತರವಾಗಿ ಉಚಿತವಾಗಿ ಯೋಗ ಸೇವೆಯ ಮೂಲಕ ಜನರಿಗೆ ಆರೋಗ್ಯ ಭಾಗ್ಯವನ್ನು ಕಲ್ಪಿಸುತ್ತಿದೆ. ನಗರದ ಪ್ರತಿ ವಾರ್ಡ ಗಳಲ್ಲಿ ನಾಗರಿಕರಿಗೆ ಯೋಗಭ್ಯಾಸ ಕೈಕೊಳ್ಳಲು ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ಮುಖಂಡರಾದ ರಾಜು ದಂಡಿಗೆ, ಬಿ.ಎಸ್.ಕಟಗೇರಿ, ಸೀಮಾ ಮಣ್ಣೂರ, ಗುರುಪಾದಪ್ಪ ಕಂಬಳಿ, ರಾಜೇಂದ್ರ ಹೂಲಿ, ಸುರೇಶ ನಾಯಕ, ಶಶಿ ಕಂಬಳಿ, ಮೀರಾ ಕಾಂಬಳೆ, ಶಿಲ್ಪಿ ಅಕ್ಕಿಮರಡಿ, ಸೌಮ್ಯ ಬಸಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net