ಗುರು ಕಾಣಿಕೆಯಾಗಿ ಸಸಿ ನೀಡಿದ ವಿದ್ಯಾರ್ಥಿಗಳು

College photo.....
Published on

ಬಾಗಲಕೋಟೆ: ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್. ಆರ್. ನರಸಾಪುರ ಕಲಾ ಮತ್ತು ಎಂ. ಬಿ ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಸಸಿಗಳನ್ನು ನೀಡುವುದರ ಮೂಲಕ ಗುರುವಾರ ಶಿಕ್ಷಕರ ದಿನಾಚರಣೆ ಆಚರಿಸಿದರು.

ತಮ್ಮನ್ನು ಬೆಳೆಸಿದ ಹಾಗಿಯೇ ಈ ಸಸಿಗಳನ್ನು ಬೆಳೆಸಿ ಪರಿಸರ ರಕ್ಷಣೆಗೆ ಕೈಜೋಡಿಸಲು ಮನವಿ ಮಾಡಿದರು. ಈ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗಾಗಿ ತಾವು ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ, ಡಾ. ಎಸ್ ರಾಧಾಕೃಷ್ಣನ್ನರ ಬದುಕು-ಬರಹ ಕುರಿತು ಮಾತನಾಡಿದರು.

ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ವಿದ್ಯಾರ್ಥಿಗಳ ಶ್ರೇಯಾಭಿವೃದ್ದಿ ಬಯಸುವ ಶಿಕ್ಷಕ ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಶಿಕ್ಷಕನಿಗೆ ವಿದ್ಯಾರ್ಥಿಗಳೇ ನಿಜವಾದ ಆಸ್ತಿ, ಅಜ್ಞಾನದ ಕತ್ತಲೆ ನೀಗಿ, ಜ್ಞಾನದ ಬೆಳಕನ್ನು ನೀಡಿ, ಅವರ ಭವಿಷ್ಯವನ್ನು ಶಿಕ್ಷಕರು ರೂಪಿಸುತ್ತಾರೆ ಎಂದರು.

ಉಪನ್ಯಾಸಕರಾದ ಎಸ್,ವಾಯ್.ಬೊಮ್ಮಣ್ಣವರ, ಎಂ.ಡಿ. ಕೋರವಾರ, ಎಂ.ಕೆ.ಗುಡೂರ, ಕೆ.ಎಸ್.ದಾಸರ, ಎಸ್,ಎಸ್, ಕುಲಕರ್ಣಿ ಇದ್ದರು. ವಿದ್ಯಾರ್ಥಿಗಳಾದ ಆಸ್ಮಾ ಕಂದಗಲ್, ಶ್ರುತಿ ನಾಯಕ ಹಾಗೂ ಚಂದ್ರಶೇಖರ ಹಿರ್ಲವರ ಮಾತನಾಡಿದರು. ಶ್ರೇಯಾ ಮುತ್ತತ್ತಿ ಪ್ರಾರ್ಥಿಸಿದರು, ಪಲ್ಲವಿ ಗೌಡರ ಸ್ವಾಗತಿಸಿದರು. ಸುಷ್ಮಾ ದೇಸಾಯಿ ವಂದಿಸಿದರು. ಮೀನಾಕ್ಷಿ ಮನಗೂಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net