ಗುತ್ತಲ ಬಸ್ ನಿಲ್ದಾಣದಲ್ಲಿ ಆಸನ ವ್ಯವಸ್ಥೆ

11GTL3
Published on

ಗುತ್ತಲ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುವ ಆಸನ ನಿರ್ವಿುಸಲಾಗಿದ್ದು, ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಳ್ಳುವ ತೊಂದರೆ ತಪ್ಪಿದಂತಾಗಿದೆ.

ಬಸ್ ನಿಲ್ದಾಣಕ್ಕೆ ಬರುವ ರಸ್ತೆಯನ್ನು 4-5 ತಿಂಗಳ ಹಿಂದೆ ಕಾಂಕ್ರಿಟೀಕರಣ ಮಾಡುವ ವೇಳೆ ಆಸನಗಳನ್ನು ನಿರ್ವಿುಸಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗಿತ್ತು. ಈ ಕುರಿತು ‘ವಿಜಯವಾಣಿ’ಯಲ್ಲಿ ಮಾ. 8ರಂದು ‘ಆಸನವಿಲ್ಲದ ಗುತ್ತಲ ಬಸ್ ನಿಲ್ದಾಣ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗುತ್ತು. ಇದಕ್ಕೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು ಅಪೂರ್ಣ ಕಾಮಗಾರಿ ಮಾಡಿದ್ದ ಗುತ್ತಿಗೆದಾರರಿಂದ ನಿಲ್ದಾಣದಲ್ಲಿ ಆಸನಗಳನ್ನು ನಿರ್ವಿುಸಿದ್ದಾರೆ. ಇದರಿಂದ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದ ತೊಂದರೆ ತಪ್ಪಿದಂತಾಗಿದೆ. ಆಸನಗಳ ಮೇಲೆ ಬಿಸಿಲಿನಿಂದ ರಕ್ಷಣೆಯಾಗಲು ಮೇಲ್ಛಾವಣಿಯನ್ನು ನಿರ್ವಿುಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net