

ಬಾಗಲಕೋಟೆ: ಎರಡು ದಶಕಗಳ ಹೆಚ್ಚು ಕಾಲದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆರೂಡಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯು ರೋಗಿಗಳ ಆರೈಕೆ ಜೊತೆಗೆ ಗುಣಮಟ್ಟದ ಸೇವೆಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಸಂಸ್ಥೆಯ ಚೆರ್ಮನ್ ಡಾ.ಬಿ.ಎಚ್.ಕೆರೂಡಿ ಹೇಳಿದರು.
ನಗರದ ಕೆರೂಡಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ, ಕೆರೂಡಿ ಹೆಲ್ತಕೇರ್ ಪ್ರೈ. ಲಿಂ ಆಶ್ರಯದಲ್ಲಿ ಮಂಗಳವಾರ ಹಾಲಮ್ಮ ಕೆರೂಡಿ ಕ್ಯಾನ್ಸರ ಮತ್ತು ಹೃದಯರೋಗ ಆಸ್ಪತ್ರೆಯ ೯ ನೇ ವಾರ್ಷಿಕ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಕ್ಯಾನ್ಸರ್ ಮತ್ತು ಹೃದಯರೋಗ ಚಿಕಿತ್ಸೆ, ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾನಾಡಿದರು.
ಬಾಗಲಕೋಟೆ, ಕೊಪ್ಪಳ, ಗದಗ, ರಾಯಚೂರ ಭಾಗದ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕೆರೂಡಿ ಆಸ್ಪತ್ರೆ ಸ್ಥಾಪಿಸಲಾಯಿತು. ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ವೈದ್ಯಕೀಯ ಕ್ಷೇತ್ರದ ಆತ್ಯಾಧುನಿಕ ತಂತ್ರಜ್ಞಾನ, ಚಿಕಿತ್ಸೆ ಕಾಲ ಕಾಲಕ್ಕೆ ಅಳವಡಿಸಿಕೊಂಡು ರೋಗಿಗಳಿಗೆ ಒದಗಿಸುತ್ತಿದೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳ ಪಾತ್ರವು ಹಿರಿದಾಗಿದೆ ಎಂದರು.
ಆಸ್ಪತ್ರೆಯು ಕಳೆದ ೯ ವರ್ಷ ಗಳಲ್ಲಿ ಸರ್ಕಾರಿ ಮತ್ತು ವಿವಿಧ ಖಾಸಗಿ ವಿಮಾ ಯೋಜನೆಗಳ ಅಡಿಯಲ್ಲಿ ಕ್ಯಾನ್ಸರ್ ಮತ್ತು ಹೃದಯರೋಗಳಿಗೆ ಸಂಬಂಽಸಿದ ಚಿಕಿತ್ಸೆ ಪರಿಣಾಮಕಾರಿಯಾಗಿ ನೀಡುತ್ತಿದೆ. ಕ್ಯಾನ್ಸರ್ ವಿಭಾಗದಲ್ಲಿ ೪೭೧೫೬ ಹೊರರೋಗಿಗಳಿಗೆ ಮತ್ತು ೨೬೧೫೦ ಒಳರೋಗಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಹೃದಯರೋಗ ವಿಭಾಗದಲ್ಲಿ ೬೨೭೯೦ ಹೊರ ರೋಗಿಗಳಿಗೆ ೧೧೩೦೧ ಒಳರೋ ಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಅನುಸೂಯಾ ಬಿ. ಕೆರೂಡಿ, ಡಾ.ಸೋಮಶೇಖರ ಬಿ ಕೆರೂಡಿ, ಡಾ.ನಾರಾಯಣ ಎಂ., ಡಾ.ಸುನೀತಾ ಎಸ್. ಕೆರೂಡಿ, ಡಾ. ಚಂದ್ರಶೇಖರ ಬಿ. ಕೆರೂಡಿ, ಡಾ. ಕ್ಷಮತಾ ಸಿ. ಕೆರೂಡಿ, ಸಂಸ್ಥೆಯ ಹೃದಯ ರೋಗ ತಜ್ಞ ವೈದ್ಯರಾದ ಡಾ. ಸಂತೋಷ ಹುಕ್ಕೇರಿ, ಡಾ. ಸಂತೋಷ ಚಿಕ್ಕೋಡಿ, ಡಾ. ಪ್ರಶಾಂತ ಸಿದ್ದಮಲ್ಲ ಹಾಗೂ ಕ್ಯಾನ್ಸರ್ ತಜ್ಞ ವೈದ್ಯ ಡಾ.ಸುರೇಶ ಉಳ್ಳಾಗಡ್ಡಿ, ಡಾ. ಈರಪ್ಪ ಮದಭಾವಿ, ಡಾ. ಮಧು ವೈ.ಸಿ, ಡಾ. ಹಂಸಾ ನಂದಿನಿ, ಡಾ.ಚಾಲ್ಸ್ ಪಾಲ್ ಉಪಸ್ಥಿತರಿದ್ದರು.