ಗುಣಮಟ್ಟದ ಸಮುದಾಯ ಭವನ ನಿರ್ಮಿಸಲಿ

28Huk2
Published on

ಹುಕ್ಕೇರಿ: ಸರ್ವರಿಗೂ ಒಳಿತು ಬಯಸುವ ಜೈನ ಧರ್ಮೀಯರು ಕಾಯಕ ನಿಷ್ಠೆ, ಧಾರ್ಮಿಕ ಕಾರ್ಯಗಳು ಇತರರಿಗೆ ಮಾದರಿ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು. ತಾಲೂಕಿನ ಯರನಾಳ ಗ್ರಾಮದ ಜೈನ ಮಂದಿರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಮಂಜೂರಾದ 50 ಲಕ್ಷ ರೂ. ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಗುಣಮಟ್ಟದ ಭವನ ನಿರ್ಮಾಣಕ್ಕೆ ಅನುದಾನ ಕಡಿಮೆಯಾದಲ್ಲಿ ಶಾಸಕರ ನಿಧಿ ಅಥವಾ ಇನ್ನಿತರ ಯೋಜನೆಯಡಿ ಅನುದಾನ ಕೊಡಿಸುವ ಭರವಸೆಯಿತ್ತರು. ಶಾಸಕರನ್ನು ಸನ್ಮಾನಿಸಲಾಯಿತು.

ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡರಾದ ಕೆಂಪಣ್ಣ ದೇಸಾಯಿ, ಚಿದಾನಂದ ಡಬ್ಬು, ಪಿಕೆಪಿಎಸ್ ಚೇರ್ಮನ್ ಧನ್ಯಕುಮಾರ ಪಾಟೀಲ, ನಿರ್ದೇಶಕರಾದ ಶ್ರೀಕಾಂತ ಪಾಟೀಲ, ವಿದ್ಯಾಧರ ಮಗದುಮ್ಮ, ಗ್ರಾಪಂ ಸದಸ್ಯ ಪ್ರಫುಲ ಪಾಟೀಲ, ರಾಜು ಹುಣಚ್ಯಾಳಿ, ಸಾತಪ್ಪ ಪಾಟೀಲ, ಬಾಹುಬಲಿ ರಾಮಣ್ಣವರ, ಪದ್ಮರಾಜ ಪಾಟೀಲ, ರಾಜು ಲಠ್ಠಿ, ಅಜಿತ ರಾಮಣ್ಣವರ, ಸರದಾರ ವರ್ಧಮಾನೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net