

ಕಲಬುರಗಿ: ನೆಟ್‌ವರ್ಕಿಂಗ್ ಮತ್ತು ಸಂವಹನ ಜಗತ್ತಿನಲ್ಲಿ ಉದಯೋನ್ಮುಖ ೬ಜಿ ತಂತ್ರಜ್ಞಾನ ಹೊಸ ಅನುಭವ ಒದಗಿಸಲು ಸಿದ್ಧವಾಗಿದೆ. ೬ಜಿ ತಂತ್ರಜ್ಞಾನ ೫ಜಿಗಿಂತ ಸಂಪೂರ್ಣ ಭಿನ್ನವಾಗಿದೆ. ನೆಟ್‌ವರ್ಕಿಂಗ್ ಮತ್ತು ಸಂವಹನ ಬಳಕೆದಾರರಿಗೆ ಹೊಸದಾಗಿ ಪರಿಚಯಿಸುವ ಅನುಭವ ನೀಡುತ್ತದೆ ಎಂದು ಇಟಲಿಯ ರೋಮ್ ಟೊರ್ ವೆರ್ಗಟಾದ ರೋಮ್ ವಿಶ್ವವಿದ್ಯಾಲಯದ ರೇಡಿಯೊ ಸ್ಪೆಕ್ಟçಮ್ ಮ್ಯಾನೇಜ್‌ಮೆಂಟ್ ಸಹಾಯಕ ಪ್ರಾಧ್ಯಾಪಕ ಡಾ.ಅಲೆಸ್ಸಾಂಡ್ರೊ ವಿಝರ‍್ರಿ ಹೇಳಿದರು.
ದಿ ಇನ್‌ಸ್ಟಿಟ್ಯೂಷನ್ ಆಫ್ ಎಲೆಕ್ಟಾçನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಶನ್ ಇಂಜಿನಿಯರ್ಸ್, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಸಹಯೋಗದಡಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಿಸ್ಟಿçಬ್ಯುಟೆಡ್ ಆ್ಯಂಡ್ ಇಂಟೆಲಿಜೆAಟ್ ಕಮ್ಯುನಿಕೇಶನ್ ನೆಟ್‌ವರ್ಕ್ಸ್ ಕುರಿತ ಅಂತಾರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ವಿವಿ ಮತ್ತು ತಾಂತ್ರಿಕ ಶಿಕ್ಷಣದ ಉನ್ನತ ಅಧ್ಯಯನ ಕೇಂದ್ರಗಳ ಅಧ್ಯಾಪಕರ ಮೇಲೆ ೬ಜಿ ನೆಟ್‌ವರ್ಕಿಂಗ್ ಮತ್ತು ಸಂವಹನ ಜಗತ್ತಿನಲ್ಲಿ ಭವಿಷ್ಯದ ಸವಾಲು ಎದುರಿಸಲು ತಮ್ಮ ಕಲಿಕಾ ಗುಣಮಟ್ಟ ಹೆಚ್ಚಿಸುವ ಗುರುತರ ಜವಾಬ್ದಾರಿ ಇದೆ. ಇದನ್ನು ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕೌಶಲ ಸುಧಾರಿಸುವ ಅಗತ್ಯವಿದೆ. ೬ಜಿ ತಂತ್ರಜ್ಞಾನದಿಂದ ವಿದ್ಯಾರ್ಥಿಗಳ ವೃತ್ತಿಪರ ಭವಿಷ್ಯದಲ್ಲಿ ಅನೇಕ ಸವಾಲು ತೆರೆದುಕೊಳ್ಳುತ್ತದೆ ಎಂದರು.
ಅಧ್ಯಾಪಕರು ಮತ್ತು ಸಂಶೋಧಕರು ೬ಜಿ ತಂತ್ರಜ್ಞಾನದ ಸಂಕೀರ್ಣ ವಿನ್ಯಾಸ, ಬಳಕೆ, ಬಾಹ್ಯಾಕಾಶ ತಂತ್ರಜ್ಞಾನ ಬಳಸಿ ಕೋರ್ ನೆಟ್‌ವರ್ಕಿಂಗ್ ಮತ್ತು ಸಂವಹನದಲ್ಲಿ ಅದರ ಉಪಯೋಗದ ಬಗ್ಗೆ ಅಧ್ಯಯನ ಮಾಡುವ ತುರ್ತು ಅಗತ್ಯವಿದೆ ಎಂದು ಡಾ.ವಿಝರ‍್ರಿ ಒತ್ತಿ ಹೇಳಿದರು. ನಂತರ ವಿವಿ ಬೋಧಕರ ಜತೆ ಸಂವಾದ ನಡೆಸಿದರು.
ಶರಣಬಸವ ವಿವಿ ಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಮಾತನಾಡಿ, ೬ಜಿ ನೆಟ್‌ವರ್ಕಿಂಗ್ ಮತ್ತು ಸಂವಹನದ ಉದಯೋನ್ಮುಖ ಕ್ಷೇತ್ರಗಳಲ್ಲಿ ತಮ್ಮ ಬೋಧನಾ ಸಾಮರ್ಥ್ಯ ಉತ್ತಮಗೊಳಿಸಲು ವಿವಿ ಬೋಧಕ ಸಿಬ್ಬಂದಿಗೆ ಡಾ.ವಿಝರ‍್ರಿ ಅವರ ಜ್ಞಾನಭಂಡಾರ ತುಂಬಾ ನೆರವಾಗಲಿದೆ ಎಂದು ಹೇಳಿದರು.
ಕುಲಸಚಿವ ಡಾ.ಎಸ್.ಜಿ. ಡೊಳ್ಳೇಗೌಡರ್, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಡಾ.ಶಿವಕುಮಾರ ಜವಳಗಿ, ಡಾ.ಶಿವಗಂಗಾ ಪಾಟೀಲ್ ಇತರರಿದ್ದರು.