ಗುಡ್ಡ ಕುಸಿತ ಸಂತ್ರಸ್ಥರಿಗೆ ಸಿಎಂ ಸಾಂತ್ವನ

IMG-20220803-WA01172.jpg
Published on

ವಿಜಯವಾಣಿ ಸುದ್ದಿಜಾಲ ಭಟ್ಕಳ
ಮನೆಯ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಇಲ್ಲಿನ ಮುಟ್ಟಳ್ಳಿಯ ಪ್ರದೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಸಾಯಂಕಾಲ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ, 20.9 ಲಕ್ಷ ರೂ.ಗಳ ಪರಿಹಾರದ ಆದೇಶ ವಿತರಿಸಿದರು.
ಸೋಮವಾರ ರಾತ್ರಿ 4 ತಾಸಿನಲ್ಲಿ 550 ಮೀಟರ್ ಮಳೆ ಬಿದ್ದ ಪರಿಣಾಮ ಮುಟ್ಟಳ್ಳಿಯ ಮುಟ್ಟಳ್ಳಿಯಲ್ಲಿ ಮನೆಯೊಂದರ ಗಿಂದಿನ ಧರೆ ಕುಸಿದು ಮನೆಯ ಮೇಲೆ ಬಿದ್ದು, ಲಕ್ಷ್ಮೀ ನಾರಾಯಣ ನಾಯ್ಕ (60),ಆಕೆಯ ಪುತ್ರಿ ಲಕ್ಷ್ಮೀ ನಾಯ್ಕ (40),ಪುತ್ರ ಅನಂತ ನಾರಾಯಣ ನಾಯ್ಕ (38) ಸಂಬಧಿ ಪ್ರವೀಣ ನಾಯ್ಕ (17) ಮೃತಪಟ್ಟಿದ್ದರು.

ಜಿಯಾಲಜಿಕಲ್ ಸರ್ವೇ:
ನಂತರ ಸಿಎಂ ಜಿಲ್ಲಾಧಿಕಾರಿಯಿಂದ ಅತಿವೃಷ್ಟಿಯ ಮಾಹಿತಿ ಪಡೆದರು. ಒಂದೇ ದಿನದಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಿ ಹಾನಿಯ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿ. ಪರಿಹಾರಕ್ಕೆ ಬೇಕಾದ ಹಣ ಬಿಡುಗಡೆ ಮಾಡುತ್ತೇನೆ ಎಂದು ಸೂಚನೆ ನೀಡಿದರು.

ಈ ಭಾಗದಲ್ಲಿ ಲ್ಯಾಟರೈಟ್ ಗುಡ್ಡಗಳ ಬುಡದಲ್ಲಿ ಆಪತ್ತಿನಲ್ಲಿ ವಾಸಮಾಡುತ್ತಿರುವ ಮನೆಗಳ ಬಗ್ಗೆ ಭೂಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ನಡೆಸಿ, ಸ್ಥಳಾಂತರಿಸುವ ಕಾರ್ಯ ಮಾಡಲಾಗುವುದು ಎಂದರು.
ಮಳೆಯಿಂದ 450 ಕ್ಕೂ ಅಧಿಕ ಅಂಗಡಿಗಳಿಗೆ 2 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳಲ್ಲಿ ಹೂಳು ತುಂಬಿದೆ. 130 ದೋಣಿಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಡಳಿತದ ಬಳಿ ಇರುವ 38 ಕೋಟಿ ರೂ. ಹಣದಲ್ಲಿ ಮನೆಗಳಿಗೆ ನೀರು ನುಗ್ಗಿದವರಿಗೆ ತಕ್ಷಣ. ತಲಾ 10 ಸಾವಿರ ರೂ. ಪರಿಹಾರ ಒದಗಿಸಿ. ಅಂಗಡಿಗಳಿಗೆ, ದೋಣಿ ಹಾನಿಗೆ ಉಂಟಾದ ನಷ್ಟಕ್ಕೆ ವಿಶೇಷ ಪರಿಹಾರ ಘೋಷಿಸಲಾಗುವುದು ಎಂದು ಸಿಎಂ ಸೂಚನೆ ನೀಡಿದರು‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net