ಗುಡೂರ ಎಸ್.ಸಿ ಸಮೀಪ ಪಾದಯಾತ್ರೆ

bkt-11-2
Published on

ಗುಡೂರ ಎಸ್.ಸಿ: ಇಳಕಲ್ಲ ಹಾಗೂ ಹುನಗುಂದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ನಡಿಗೆ ಹಳ್ಳಿಯ ಕಡೆಗೆ ಪಾದಯಾತ್ರೆ ಈಚೆಗೆ ಪ್ರಾರಂಭವಾಯಿತು.

ಸಮೀಪದ ಗಾಣದಾಳ ಗ್ರಾಮದಲ್ಲಿ ಆರಂಭವಾದ ಪಾದಯಾತ್ರೆ ಮುರಡಿ ಚಿಕನಾಳ ಮಾರ್ಗವಾಗಿ ಭೀಮನಗಡ ಗ್ರಾಮದಲ್ಲಿ ಅಂತ್ಯವಾಯಿತು. ಉಪನಾಳ, ಸಿದ್ದನಕೊಳ್ಳ ಬೇನಕನವಾರಿ ಚಿಲ್ಲಾಪುರ, ಕ್ಯಾದಿಗೇರಿ, ಕುಣಿಬೆಂಚಿ, ಸುಲೇಭಾವಿ, ತಳ್ಳಿಕೇರಿ, ಕೆಲೂರಗೆ ತಲುಪಿತು. ಭಾನುವಾರ ಇಲಾಳ ಗ್ರಾಮದಿಂದ ಪ್ರಾರಂಭವಾಗಿ ದಮ್ಮೂರು, ವಡಗೇರಿ, ಸೋಮವಾರ ಗುಡೂರು ಪಟ್ಟಣದ ಎಲ್ಲ ವಾರ್ಡುಗಳಲ್ಲಿ ಸಂಚರಿಸಿ ಸಂಜೆ ಸಮಾರೋಪಗೊಳ್ಳಲಿದೆ.

ಈ ಸಂದರ್ಭದಲ್ಲಿ ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ, ಕೆಪಿಸಿಸಿ ಉಸ್ತುವಾರಿ ನಿಸಾರ ಅಹಮದ ಖಾಜಿ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿಜಯಮಹಾತೇಶ ಗದ್ದನಕೇರಿ, ಎಂ.ಆರ್.ಬಾಗವಾನ., ಖಾಜೇಸಾಬ ಬಾಗವಾನ, ವಿರೇಶ ಗಂಜಿಹಾಳ, ಅಪ್ಪಾಸಾಬ ನಾಡಗೌಡ., ಯಮನೂರಪ್ಪ ಚಳ್ಳಪ್ಪನವರ, ಮುತ್ತಣ್ಣ ಕಿಲ್ಲೇದ, ಮುತ್ತಣ್ಣ ಕಲಗುಡಿ ಸೇರಿದಂತೆ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net