ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಚಾಲನೆ

22-KRPETE-1
Published on

ಕೆ.ಆರ್.ಪೇಟೆ: ಪಟ್ಟಣದ ಶ್ರವಣಬೆಳಗೊಳ ರಸ್ತೆಯಲ್ಲಿರುವ ಶ್ರೀ ಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ವಿಧ್ಯುಕ್ತವಾಗಿ ನವಗ್ರಹ ಹೋಮ ಪೂಜಾ ಕಾರ್ಯಕ್ರಮದೊಂದಿಗೆ ಬುಧವಾರ ಆರಂಭವಾಯಿತು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತಿಯ ನಮನ ಸಲ್ಲಿಸಿ ಕೃತಾರ್ಥರಾದರು.


ಗುರುವಾರ ಹರಿದ್ರಾ ಗಣಪತಿ ಹೋಮ ನೆರವೇರಿಸಲಾಗಿದ್ದು, ಶುಕ್ರವಾರ ಕೂಷ್ಮಾಂಡ ಹೋಮ, ಧಾತ್ರಿ ಹೋಮ ಹಾಗೂ ಪವಮಾನ ಹೋಮ ನಡೆಸಲಾಗುವುದು. ಶನಿವಾರ ರುದ್ರ ಹೋಮ ಹಮ್ಮಿಕೊಳ್ಳಲಾಗಿದೆ.


ಭಾನುವಾರ ಚಂಡಿಕಾ ಹೋಮ ಹಾಗೂ ಸ್ವಯಂವರ ಪಾರ್ವತಿ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು, 27ರಂದು ಗಿರಿಜಾ ಕಲ್ಯಾಣ ಮಹೋತ್ಸವದೊಂದಿಗೆ ಪೂಜೆ ಸಂಪನ್ನಗೊಳ್ಳಲಿದೆ. ಆರು ದಿನಗಳ ಕಾಲ ಪ್ರತಿದಿನ ಸಾಯಂಕಾಲ ಶ್ರೀ ಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಭರತನಾಟ್ಯ ಪ್ರದರ್ಶನ, ವೀಣಾವಾದನ, ಕಾವ್ಯವಾಚನ, ಭಕ್ತಿಗೀತೆ ಗಾಯನ ಹಾಗೂ ಸಂಗೀತ ಕಾರ್ಯಕ್ರಮ, ಕೃತಿಕಾ ದೀಪೋತ್ಸವ ಹಾಗೂ ಉಯ್ಯಲೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಸಾಂಸ್ಕೃತಿಕ ಸಂಘಟಕ ಗೋಪಾಲಕೃಷ್ಣ ಅವಧಾನಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಉದ್ಯಮಿ ಅರವಿಂದ್‌ಕಾರಂತ್, ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳಾದ ರಘುರಾಮ ನಾಡಿಗ್, ಸಂಧ್ಯಾ ಮಾರ್ತಾಂಡ, ವೇದಬ್ರಹ್ಮ ಮಾಲತೇಶ್‌ಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net