ಗಿಡ ನೆಡುವ ಕಾರ್ಯಕ್ರಮ

13kglphoto-2.......
Published on

ಕೊಳ್ಳೇಗಾಲ: ಪಟ್ಟಣದ ಮಡಿವಾಳ ಜನಾಂಗದ ರುದ್ರಭೂಮಿಯಲ್ಲಿ ಇತ್ತೀಚೆಗೆ ಮಡಿವಾಳರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ ಮಾತನಾಡಿ, ಗಿಡ-ಮರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕು. ರುದ್ರಭೂಮಿಯಲ್ಲಿ 120 ಗಿಡಗಳನ್ನು ನೆಟ್ಟಿದ್ದು, ಒಂದು ಗಿಡವೂ ಹಾಳಾಗದಂತೆ ಪೋಷಣೆ ಮಾಡಲಾಗುವುದು ಎಂದರು.


ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ದೀಪಕ್, ಮಡಿವಾಳ ಸಂಘದ ಪದಾಧಿಕಾರಿಗಳ ಮಂಜು, ಸಿದ್ದರಾಜು, ಆನಂದ್, ಪಾಪಣ್ಣ, ಶಾಂತರಾಜು, ವನ್ನಿ ಮಾದಯ್ಯ, ಮಂಜು, ಸೀನಾ, ರಾಚ, ಯಜಮಾನರಾದ ನಾಗಣ್ಣ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net