ಗಾಂಜಾ ಸಂಗ್ರಹಿಸಿದ್ದ ಅಸ್ಸಾಂನ ಕಾರ್ಮಿಕನ ಬಂಧನ

Published on

ಶನಿವಾರಸಂತೆ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ್ದ ಅಸ್ಸಾಂ ಮೂಲದ ಕಾರ್ಮಿಕನೊಬ್ಬನನ್ನು ಮಂಗಳವಾರ ಶನಿವಾರಸಂತೆ ಪೊಲೀಸರು ಬಂಧಿಸಿ, ಆತನಿಂದ ಒಂದು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮೈಸೂಲ್ ಹಕ್ ಬಂಧಿತ ಕೂಲಿ ಕಾರ್ಮಿಕ. ಶನಿವಾರಸಂತೆಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಮೈಸೂಲ್ ಹಕ್ ಇತ್ತೀಚೆಗೆ ಅಸ್ಸಾಂಗೆ ತೆರಳಿದ್ದ, ಶನಿವಾರಸಂತೆಗೆ ವಾಪಸ್ ಬರುವಾಗ 1 ಕೆ.ಜಿ. ಗಾಂಜಾ ತಂದಿದ್ದ.

ಈ ಬಗ್ಗೆ ಶನಿವಾರಸಂತೆ ಪೊಲೀಸರಿಗೆ ದೊರೆತ ಖಚಿತ ಸುಳಿವು ಮೇರೆಗೆ ಪೊಲೀಸರು ಆರೋಪಿ ಮೈಸೂಲ್ ಹಕ್‌ನನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣರಾಜ್, ಪಿಎಸ್‌ಐ ಚಂದ್ರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಹರ್ಷ, ಶಿವಪ್ಪ, ಮಹೇಶ್, ಪ್ರದೀಪ್, ಧನುಂಜಯ್, ಶಶಿಧರ್, ಡಿಂಪಲ್, ವೆಂಕಟೇಶ್ ಪಾಲ್ಗೊಂಡಿದ್ದರು.

ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net