ಗಾಂಜಾ ಮಾರುತ್ತಿದ್ದವನ ಬಂಧನ

Published on

ಸೋಮವಾರಪೇಟೆ: ಬೇಳೂರು ಬಾಣೆಯ ಸಮೀಪ ಸ್ಕೂಟರ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಪ್ರಯತ್ನಿಸಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಮಾಲು ಸಮೇತ ಬುಧವಾರ ಸಂಜೆ ಬಂಧಿಸಿದ್ದಾರೆ.

ಬೇಳೂರು ಗ್ರಾಮದ ಕಾರೇಕೊಪ್ಪ ನಿವಾಸಿ ಕೆ.ಎಸ್.ಗಣೇಶ್ ಬಂಧಿತ ಆರೋಪಿ. 3 ಸಾವಿರ ರೂ.ಮೌಲ್ಯದ 84 ಗ್ರಾಂ ಮಾದಕ ಮತ್ತು ಸ್ಕೂಟರ್ ಒಂದನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net