ಗಾಂಜಾ ಮಾರುತ್ತಿದ್ದ ಮೂವರ ಬಂಧನ

17bkl5
Published on

ಭಟ್ಕಳ: ಪಟ್ಟಣದ ಸಾಗರ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿತರಿಂದ ಸುಮಾರು 750 ಗ್ರಾಂ ತೂಕದ ಗಾಂಜಾ, ಸ್ಕೂಟಿ, 3 ಮೊಬೈಲ್ ಫೋನ್ ಹಾಗೂ 2700 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮಂಕಿ ಹೊನ್ನಾವರದ ನಿವಾಸಿ ಗಣಪತಿ ಮಂಜಪ್ಪ ನಾಯ್ಕ, ಮುರ್ಡೆಶ್ವರ ಹಿರೇದೊಮಿ ನಿವಾಸಿ ಜನಾರ್ದನ ಅಣ್ಣಪ್ಪ ಹರಿಕಂತ್ರ, ಕರಿಕಲ್ ನಿವಾಸಿ ಆನಂದ ಮಾದೇವ ಮೊಗೇರ ಬಂಧಿತರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪಿಎಸ್​ಐ ಓಂಕಾರಪ್ಪ, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್​ಐ ಭರತಕುಮಾರ ವಿ., ಎಚ್ ಬಿ. ಕುಡಗುಂಟಿ. ಎಎಸ್​ಐ ರಾಮಚಂದ್ರ ನಾಯಕ ಸೇರಿ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net